ಉಪ್ಪಳ: ಬಾಯಾರು ಸೇವಾ ಸಹಕಾರಿ ಬ್ಯಾಂಕ್ ನ ಆಡಳಿತ ಸಮಿತಿಯ ಚುನಾವಣೆಯಲ್ಲಿ ಸಹಕಾರ ಭಾರತಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿರುವÀರು. ಸುಬ್ರಹ್ಮಣ್ಯ ಭಟ್ ಅವರು ಅಧ್ಯಕ್ಷರಾಗಿರುವ ನಿರ್ದೇಶಕ ಮಂಡಳಿಗೆ ಪ್ರಮೋದ್ ಕುಮಾರ್, ಸಂದೀಪ್ ಬಿ.ಸಿ, ಮಿತೇಷ್ ಕುಮಾರ್, ಶ್ರೀಕಾಂತ್ ಭಟ್, ಪ್ರವೀಣ್ ಕುಮಾರ್, ಗೀತಾ ಲತಾ, ಜಲಜಾಕ್ಷಿ ಹಾಗೂ ಪರಮೇಶ್ವರಿ ಉಳುವಾನ ಆಯ್ಕೆಯಾದರು.
ನಿಕಟಪೂರ್ವ ಅಧ್ಯಕ್ಷ ಸುಬ್ಬಣ್ಣ ಭಟ್, ನಿರ್ದೇಶಕರಾಗಿದ್ದ ಧರ್ಮಪಾಲ್, ಬ್ಯಾಂಕ್ ನ ಪ್ರಭಾರಿಗಳಾದ ಬಾನೋಟ್ಟು ಬಾಲಕೃಷ್ಣ ಶೆಟ್ಟಿ, ಪ್ರೇಂ ಕುಮಾರ್ ಐಲ, ಸಹಕಾರ ಭಾರತಿ ನೇತಾರರಾದ ಶಂಕರನಾರಾಯಣ ಕಿದೂರು, ಗಣೇಶ ಪಾರೆಕಟ್ಟ, ವಿಘ್ನೇಶ್ವರ ಕೆದುಕೋಡಿ, ಅಶೋಕ್ ಬಾಡೂರು , ಸಂಘ ಪರಿವಾರದ ಹಿರಿಯರಾದ ಶಂಕರ ಭಟ್ ಉಳುವಾನ, ಕುಂಞಣ್ಣ ರೈ ಕಯ್ಯಾರು ಹಾಗೂ ಭಾಜಪ ಪ್ರತಿನಿಧಿಗಳಾದ ಮಣಿಕಂಠ ರೈ, ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದು ಅಭಿನಂದನೆ ಸಲ್ಲಿಸಿದರು.