ಎರ್ನಾಕುಳಂ: ಕಲಮಸ್ಸೆರಿ ಸ್ಫೋಟದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ತೊಡುಪುಳ ವಂದಮಟ್ಟಂ ಮೂಲದ ಕೆ.ವಿ.ಜಾನ್ ಮೃತರು.
ಅವರಿಗೆ 78 ವರ್ಷ ವಯಸ್ಸಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮೃತಪಟ್ಟಿದ್ದಾರೆ. ಜಾನ್ ಅವರ ಪತ್ನಿ ಲಿಲಿ ಜಾನ್ ಕೂಡ ಸ್ಫೋಟದಲ್ಲಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರೊಂದಿಗೆ ಸ್ಫೋಟದಲ್ಲಿ ಮೃತರಾದವರ ಸಂಖ್ಯೆ ಏಳಕ್ಕೆ ತಲುಪಿದೆ.
ಕಳೆದ ಅಕ್ಟೋಬರ್ 29 ರಂದು ದೇಶವನ್ನೇ ಬೆಚ್ಚಿಬೀಳಿಸಿದ ಕಲಮಶ್ಸೆರಿ ಸ್ಫೋಟ ಸಂಭವಿಸಿತ್ತು. ಕಲಮಸ್ಸೆರಿ ಸಮರ ಕನ್ವೆನ್ಷನ್ ಸೆಂಟರ್‍ನಲ್ಲಿ ನಡೆದ ಯೆಹೋವನ ಸಾಕ್ಷಿಗಳ ಸಮಾವೇಶದ ವೇಳೆ ಈ ಸ್ಫೋಟ ಸಂಭವಿಸಿದೆ. ಪ್ರಕರಣದ ಶಂಕಿತ ಆರೋಪಿ ಡೊಮಿನಿಕ್ ಮಾರ್ಟಿನ್ ಎಂದು ಪೆÇಲೀಸರು ಖಚಿತಪಡಿಸಿದ್ದಾರೆ. ಸದ್ಯ ಆರೋಪಿ ರಿಮಾಂಡ್‍ನಲ್ಲಿದ್ದಾನೆ.