ಕಾಸರಗೋಡು: ಕ್ರಿಸ್ಮಸ್-ಹೊಸ ವರ್ಷವನ್ನು ಆಚರಿಸಲು ಕುಟುಂಬಶ್ರೀ ಸದಸ್ಯರಿಗಾಗಿ ಜಿಲ್ಲಾ ಕುಟುಂಬಶ್ರೀ ವಿಶೇಷ ಪ್ಯಾಕೇಜ್ ಘೋಷಿಸಿದೆ. ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವದಲ್ಲಿ ಕುಟುಂಬಶ್ರೀ ಸದಸ್ಯರು ಅರ್ಧದಷ್ಟು ಟಿಕೆಟ್ ದರವನ್ನು ಪಾವತಿಸಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಬಹುದಾಗಿದೆ.
100ರೂ. ಬೆಲೆಯಿರುವ ಟಿಕೆಟನ್ನು ಕುಟುಂಬ ಸದಸ್ಯರು ರೂ.50 ಪಾವತಿಸಿ ಪಡೆಯಬಹುದು. 24ರಿಂದ 31ರವರೆಗೆ ಈ ರಿಯಾಯಿತಿ ಇರಲಿದೆ. ಕುಟುಂಬಶ್ರೀ ಕ್ರಿಸ್ಮಸ್ ಮತ್ತು ಹೊಸ ವರ್ಷವನ್ನು ಕುಟುಂಬದೊಂದಿಗೆ ಬೀಚ್‍ನಲ್ಲಿ ಹಬ್ಬದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಆಚರಿಸಲು ಅವಕಾಶವನ್ನು ಈ ಮೂಲಕ ಒದಗಿಸುತ್ತದೆ. ಅಲ್ಲದೆ, ಕುಟುಂಬಶ್ರೀ ಉತ್ಸವದಲ್ಲಿ ಸಾರ್ವಜನಿಕರಿಗೆ ಕೆ-ಡಿಸ್ಕ್ ಮತ್ತು ಡಿಡಿಯುಜಿಕೆವೈ ಮಳಿಗೆಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.