ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಅಡೂರು ವಿದ್ಯಾಭಾರತಿ ವಿದ್ಯಾಲಯವು ಕುಂಜತ್ತೂರು ಮಹಾಲಿಂಗೇಶ್ವರ ವಿದ್ಯಾನಿಕೇತನದಲ್ಲಿ ನಡೆದ ಭಾರತೀಯ ವಿದ್ಯಾನಿಕೇತನ ಜಿಲ್ಲಾ ಕಲೋತ್ಸವದ ಶಿಶು ವಿಭಾಗದಲ್ಲಿ 102 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದೆ. ಉತ್ತಮ ಸಾಧನೆ ತೋರಿದ ಶಾಲೆಯ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಅಭಿನಂದಿಸಿದ್ದಾರೆ.