ಮುಳ್ಳೇರಿಯ: ಮವ್ವಾರು ಶ್ರೀ ಸುಬ್ರಹ್ಮಣ್ಯ ದೇವಾಲಯದ ನವೀಕರಣ ಅಷ್ಟ ಬಂಧ ಬ್ರಹ್ಮಕಲಶೋತ್ಸವವು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಶಂಕರನಾರಾಯಣ ಶರ್ಮಾ ಗೋಸಾಡ ನೇತೃತ್ವದಲ್ಲಿ ಡಿ. 24ರಂದು ಆರಂಭಗೊಂಡಿದ್ದು, ಡಿ. 29ರ ತನಕ ವಿವಿಧ ತಾಂತ್ರಿಕ, ವೈದಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಭಾನುವಾರ(ಡಿ.24) ಬೆಳಗ್ಗೆ ಶ್ರೀ ಗಣಪತಿ ಹವನ, ನವಗ್ರಹ ಶಾಂತಿ ಹೋಮ, ಉಷ: ಪೂಜೆ, ಉಗ್ರಾಣ ತುಂಬಿಸುವುದು, ಗಣಪತಿ ಪೂಜೆ, ಹೊರೆಕಾಣಿಕೆ ಸಮರ್ಪಣೆ, ಸಂಜೆ ತಂತ್ರಿರ್ಯರ ಆಗಮನ, ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ಅಪರಾಹ್ನ ಮವ್ವಾರು ಶ್ರೀಕೃಷ್ಣ ಭÀಜನಾ ಮಂದಿರದಿಂದ ಹಸಿರುವಾಣಿ, ಹೊರೆಕಾಣಿಕೆ ಆಗಮಿಸಿತು. ನಿತ್ಯಾನಂದ ಶೆಣೈ ದೀಪ ಪ್ರಜ್ವಲನೆಗೈದರು. ಗಂಗಾಧರ ರೈ ಮಠದಮೂಲೆ ಉಪಸ್ಥಿತರಿದ್ದರು. ಸಂಜೆ ಎಡನೀರು ಮಠಾಧೀಶ ಶ್ರೀಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಆಗಮಿಸಿದರು. ಪೂರ್ಣಕುಂಭದಿಂದಿಗೆ ಸ್ವಾಗತ ನೀಡಲಾಯಿತು. ಬಳಿಕ ಧಾರ್ಮಿಕ ಸಭೆ, ರಾತ್ರಿ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಡಿ.29ರಂದು ಬೆಳಗ್ಗೆ ಗಣಪತಿ ಹವನ, ಪ್ರತಿಷ್ಠಾಪಾಣಿ, ಬೆಳಗ್ಗೆ 7.22ರ ಧನುರ್ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ಪರಿವಾರ ದೇವರುಗಳಿಗೆ ಕಲಶಾಭಿಷೇಕ, ಅವಸ್ರಾವ ಪ್ರೋಕ್ಷಣಿ, ಶ್ರೀ ಭೂತಬಲಿ, ಆಶೀರ್ವಚನ, ಮಂತ್ರಾಕ್ಷತೆ ನಡೆಯಲಿದೆ, ಬಳಿಕ ಭಜನೆ, ಯೋಗಾಸನ ಪ್ರದರ್ಶನ ಹಾಗೂ ನೃತ್ಯ ಕಾರ್ಯಕ್ರಮ ನಡೆಯಲಿದೆ. ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಸಂಜೆ ಶ್ರೀ ದೈವಗಳ ತೊಡಂಙಲ್, ಪೆÇಟ್ಟನ್ ದೈವದಕೋಲ ನಡೆಯಲಿದೆ. ಡಿ.30ರಂದು ಬೆಳಗ್ಗೆ ಶ್ರೀ ಧೂಮಾವತಿ ಹಾಗೂ ರಕ್ತೇಶ್ವರೀ ದೈವಗಳ ಕೋಲ, ಅರಸಿನಹುಡಿ ಪ್ರಸಾದ, ಅನ್ನಸಂತರ್ಪಣೆಯೊಂದಿಗೆ ಸಮಾಪ್ತಿಗೊಳ್ಳಲಿದೆ.