ಕಾಸರಗೋಡು: ಉದುಮ ಗ್ರಾಮ ಪಂಚಾಯತ್‍ನ ಬೇಕಲ ಸಹಿತ ಸಮುದ್ರ ಕಿನಾರೆಯಲ್ಲಿ ಕಡಲ್ಕೊರೆತದಿಂದ ಉಂಟಾಗುತ್ತಿರುವ ನಾಶನಷ್ಟ ಪರಿಹರಿಸಲು ಹಾಗು ಸಂರಕ್ಷಿಸಲು ಆವಿಷ್ಕರಿಸಿದ ಯೋಜನೆಯನ್ನು ಶೀಘ್ರವೇ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಮಹಿಳಾ ಆಯೋಗ ಅಧ್ಯಕ್ಷೆ ನ್ಯಾಯವಾದಿ ಸತಿದೇವಿ ಭರವಸೆ ನೀಡಿದರು.
ಉದುಮ ಪಂಚಾಯತ್‍ನ ಬೇಕಲದ ಸಮುದ್ರ ಕಿನಾರೆ ಪ್ರದೇಶಗಳ ಮೀನು ಕಾರ್ಮಿಕರ ಮನೆಗಳನ್ನು ಸಂದರ್ಶಿಸಿದ ಬಳಿಕ ಅವರು ಮಾತನಾಡಿದರು.
ಮಹಿಳಾ ಆಯೋಗ ಸದಸ್ಯರಾದ ನ್ಯಾಯವಾದಿ ಇಂದಿರಾ ರವೀಂದ್ರನ್, ನ್ಯಾಯವಾದಿ ಪಿ.ಕುಂಞõÁಯಿಷ, ವಿ.ಆರ್.ಮಹಿಳಾಮಣಿ, ಉದುಮ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ಲಕ್ಷ್ಮಿ, ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಪಿ.ಸುಧಾಕರನ್, ವಾರ್ಡ್ ಸದಸ್ಯೆ ಎನ್.ಶೈನಿಮೋಲ್ ಮೊದಲಾದವರ ನೇತೃತ್ವದಲ್ಲಿ ಮೀನು ಕಾರ್ಮಿಕರ ಮನೆಗಳನ್ನು ಸಂದರ್ಶಿಸಲಾಯಿತು.