ತಿರುವನಂತಪುರಂ: ರಾಜಭವನಕ್ಕೆ ಹೊಸ ಹಸು ಮತ್ತು ಕರು ಆಗಮಿಸಿದೆ. ಉಡುಗೊರೆಯಾಗಿ ಪಡೆದ ತಾಯಿ ಹಸು ಮತ್ತು ಕರುವನ್ನು ಬರಮಾಡಿಕೊಳ್ಳಲಾಯಿತು.
ದಕ್ಷಿಣ ವೃಂದಾವನ ಟ್ರಸ್ಟ್ ವತಿಯಿಂದ ರಾಜಭವನಕ್ಕೆ ಅರ್ಪಿಸಿದ ಹಸು ಮತ್ತು ಕರುವನ್ನು ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಮುಖಮಂಟಪಕ್ಕೆ ಆಗಮಿಸಿ ಶಾಲುಹೊದೆಸಿ ಹಾರ ಹಾಕಿ ಬರಮಾಡಿಕೊಂಡರು. ನಂತರ ಹಸಿವು ಮತ್ತು ಬಾಯಾರಿಕೆಯನ್ನು ನೀಗಿಸಲು ಹಸಿರು ಹುಲ್ಲು ಮತ್ತು ನೀರನ್ನು ನೀಡಲಾಯಿತು. ರಾಜ್ಯಪಾಲರು ತಾಯಿಹಸು ನಂದಿನಿ ಮತ್ತು ಕರುವಿಗೆ ನಂದಿ ಎಂದು ಹೆಸರಿಸಿ ಆದರಗಳೊಂದಿಗೆ ಸ್ವಾಗತಿಸಿದರು.