HEALTH TIPS

ತಮ್ಮ ಹೆಸರಲ್ಲಿ ಡೀಪ್‌ಫೇಕ್‌ ಹೂಡಿಕೆ ಜಾಹೀರಾತು: ಟಾಟಾ, ನಾರಾಯಣಮೂರ್ತಿ ಕಳವಳ

                 ಬೆಂಗಳೂರು: 'ಇತ್ತೀಚೆಗೆ ನನ್ನ ಡೀಪ್‌ಫೇಕ್ ವಿಡಿಯೊ ಜಾಹೀರಾತೊಂದು ಎಲ್ಲೆಡೆ ಹರಿದಾಡುತ್ತಿದ್ದು, ಇಂಥ ವಂಚನೆಗೆ ಒಳಗಾಗದಿರಿ' ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಎಚ್ಚರಿಸಿದ್ದಾರೆ.

                 ಈ ವಿಷಯ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, 'ಯಾವುದೇ ಆಟೊಮೇಟೆಡ್‌ ಟ್ರೇಡಿಂಗ್‌ ಆಯಪ್‌ನಲ್ಲಿ ಹೂಡಿಕೆ ಮಾಡಲು ನಾನು ಯಾವುದೇ ಜಾಹೀರಾತು ನೀಡಿಲ್ಲ.


                 ಇದರಲ್ಲಿ ನನ್ನ ಯಾವುದೇ ಪಾತ್ರವಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

'ಬಿಟಿಸಿ ಎಐ ಎವಾಕ್ಸ್‌, ಬ್ರಿಟಿಷ್ ಬಿಟ್‌ಕಾಯಿನ್ ಪ್ರಾಫಿಟ್‌, ಬಿಟ್‌ ಲೈಟ್‌, ಸಿಂಕ್‌, ಇಮಿಡಿಯಟ್ ಮೊಮೆಂಟಮ್, ಕ್ಯಾಪಿಟಲಿಕ್ಸ್‌ ವೆಂಚರ್ಸ್‌ ಇತ್ಯಾದಿ ಅಂತರ್ಜಾಲ ಆಧಾರಿತ ಹೂಡಿಕೆ ತಾಣಗಳನ್ನು ಬಳಸುವಂತೆ ನಾನು ತಿಳಿಸಿರುವುದಾಗಿ ಕೆಲವೆಡೆ ಸುಳ್ಳು ಸುದ್ದಿ ಹರಡುತ್ತಿದೆ. ಇವುಗಳಲ್ಲಿ ಹಲವರು ತಮ್ಮದು ಜನಪ್ರಿಯ ಸುದ್ದಿ ಸಂಸ್ಥೆ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದು, ಅದರಲ್ಲಿ ನನ್ನ ಡೀಪ್‌ಫೇಕ್‌ ಚಿತ್ರ ಹಾಗೂ ವಿಡಿಯೊ ಹಂಚಿಕೊಳ್ಳಲಾಗಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

             ನಾರಾಯಣಮೂರ್ತಿ ಅವರಂತೆಯೇ ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ಅವರೂ ತಮ್ಮ ಹೆಸರನ್ನೂ ಸಾಮಾಜಿಕ ಜಾಲತಾಣದಲ್ಲಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಬುಧವಾರ ಆತಂಕ ವ್ಯಕ್ತಪಡಿಸಿದ್ದರು.

                 ಹೂಡಿಕೆಯ ತಾಣದ ಕುರಿತು ಜಾಹೀರಾತಿನಲ್ಲಿ ರತನ್ ಟಾಟಾ ಅವರನ್ನು ಸೊನಾ ಅಗರ್ವಾಲ್‌ ಎಂಬುವವರು ಸಂದರ್ಶನ ನಡೆಸಿದ ವಿಡಿಯೊ ಬಳಕೆ ಮಾಡಲಾಗಿತ್ತು. ಇದರಲ್ಲಿ ಟಾಟಾ ಅವರು, 'ಶೇ 100ರಷ್ಟು ಅಪಾಯವಿಲ್ಲ' ಎಂಬ ಹೇಳಿಕೆ ಇತ್ತು. ಇದು ಸುಳ್ಳು ಎಂದು ರತನ್ ಟಾಟಾ ಹೇಳಿದ್ದಾರೆ.

                 ಈ ಘಟನೆಯಾದ ಒಂದು ದಿನದ ಅಂತರದಲ್ಲೇ ನಾರಾಯಣಮೂರ್ತಿ ಅವರು ಡೀಪ್‌ಫೇಕ್ ಕುರಿತು ಎಚ್ಚರಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries