ಕುಂಬಳೆ : ಕುಂಬಳೆ ಪಂಚಾಯತಿ ಬಿಜೆಪಿ ಸಮಿತಿ ವತಿಯಿಂದ ಬಿಜೆಪಿಯ ಹಿರಿಯ ನೇತಾರ, ಮಾಜಿ ಜಿಲ್ಲಾಧ್ಯಕ್ಷ, ಮಾಜಿ ರಾಜ್ಯ ಸಮಿತಿ ಉಪಾಧ್ಯಕ್ಷರಾಗಿ, ತುರ್ತು ಪರಿಸ್ಥಿತಿ ಹೋರಾಟಗಾರರೂ ಆಗಿದ್ದ ಸ್ವರ್ಗಿಯ ಮಡಿಕ್ಕೆ ಕಮ್ಮಾರನ್ ಅವರ 6 ನೇ ವರ್ಷದ ಸಂಸ್ಮರಣ ಕಾರ್ಯಕ್ರಮ ಕುಂಬಳೆಯ ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂಬಳೆ ಪಂಚಾಯತಿ ಬಿಜೆಪಿ ಸಮಿತಿ ಅಧ್ಯಕ್ಷ ಸುಜಿತ್ ರೈ ವಹಿಸಿದ್ದರು.ಮಂಡಲ ಉಪಾಧ್ಯಕ್ಷರಾದ ಕೆ ರಮೇಶ ಭಟ್, ಪ್ರೇಮಲತಾ ಎಸ್, ಕಾರ್ಯದರ್ಶಿ ಕೆ. ಸುಧಾಕರ ಕಾಮತ್, ಯುವಮೋರ್ಚಾ ಕುಂಬಳೆ ಘಟಕ ಅಧ್ಯಕ್ಷ ಅಜಿತ್ ಕುಮಾರ್, ಜನಪ್ರತಿನಿಧಿಗಳಾದ ಮೋಹನ ಕೆ, ಸುಲೋಚನಾ, ಪುಷ್ಪಲತಾ, ವಿದ್ಯಾ ಎನ್ ಪೈ, ಹಿರಿಯರಾದ ವೇಣು ಕಡಪ್ಪರ, ಗೋಪಾಲ ಪೂಜಾರಿ, ಶಶಿ ಕುಂಬಳೆ ಉಪಸ್ಥಿತರಿದ್ದರು.ಪಂಚಾಯತಿ ಸದಸ್ಯ ವಿವೇಕಾನಂದ ಶೆಟ್ಟಿ ಸ್ವಾಗತಿಸಿ, ಅಜಯ ಎಂ ವಂದಿಸಿದರು.