ಕುಂಬಳೆ: ಸಾಮಾಜಿಕ ಹಾಗು ಸಾಂಸ್ಕøತಿಕ ಸಂಘಟನೆಯಾದ ಕೊಕ್ಕೆಜಾಲ್ ಲಿಟ್ಲ್ ಬ್ರದರ್ಸ್ ನೇತೃತ್ವದಲ್ಲಿ ಕ್ರಿಸ್ಮಸ್ ಫೀಸ್ಟ-2023 ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಕೊಕ್ಕೆಜಾಲ್ ಜಂಕ್ಷನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಯ್ಯಾರ್ ಕ್ರಿಸ್ತ ರಾಜ ದೇವಾಲಯದ ಧರ್ಮಗುರು ಫಾದರ್ ವಿಶಾಲ್ ಮೋನಿಸ್ ಅಧ್ಯಕ್ಷತೆ ವಹಿಸಿ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅತಿಥಿಗಳಾಗಿ ಧರ್ಮನಗರ ಮಣವಾಠಿ ಬೀವಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಮೂಸ ಕುಂಞÂ ಡಿ, ಸಮಾಜ ಸೇವಕಿ ಹಾಗು ಬ್ಲಾಕ್ ಪಂಚಾಯತ್ ಸದಸ್ಯೆ ಬೇಬಿ ಶೆಟ್ಟಿ, ಕಯ್ಯಾರ್ ವಿಜಯ ಜೇಸುರಾಜ್ ಕಾನ್ವೆಂಟ್ ಸುಪೀರಿಯರ್ ಜಾಸ್ಮಿನ್ ಲೂವಿಸ್, ಪೈವಳಿಕೆ ಪಂಚಾಯತಿ ಸದಸ್ಯ ಅವಿನಾಶ್ ಮಚಾದೊ, ಕಯ್ಯಾರ್ ಕ್ರಿಸ್ತರಾಜ ದೇವಾಲಯದ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಡಿ'ಸೋಜ ಹಾಗು ಕಾರ್ಯದರ್ಶಿ ಝೀನಾ ಡಿ'ಸೋಜ ಸಂದೇಶ ನೀಡಿದರು. ಕ್ರಿಸ್ಮಸ್ ಕ್ಯಾರಲ್ಸ್ ವಿವಿಧ ನೃತ್ಯ ಸೇರಿದಂತೆ ಸಾಂಸ್ಕøತಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನಡೆಸಲಾಯಿತು. ಲಿಟ್ಲ್ ಬ್ರದರ್ಸ್ ಅಧ್ಯಕ್ಷ ಜೂಲಿಯಾನ ಕ್ರಾಸ್ತಾ ಸ್ವಾಗತಿಸಿದರು. ಜೋಸ್ಟಲ್ ಡಿ'ಸೋಜ, ಪವಿತಾ ಡಿ'ಸೋಜ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅಮ್ಮ ಕಲಾವಿದೆರ್ ಕುಡ್ಲ ಅವರಿಂದ ತುಳು ಹಾಸ್ಯಮಯ ನಾಟಕ `ಅಮ್ಮೆರ್' ಪ್ರದರ್ಶನಗೊಂಡಿತು.