ಕೋಝಿಕ್ಕೋಡ್: ಖ್ಯಾತ ವ್ಯಂಗ್ಯಚಿತ್ರಕಾರ ರಾಜೀಂದ್ರ ಕುಮಾರ್ (59) ನಿಧನರಾಗಿದ್ದಾರೆ. ಜಾಹೀರಾತು ವಿಭಾಗದಲ್ಲಿ ಮಾತೃಭೂಮಿ ಕೋಝಿಕ್ಕೋಡ್ ಪ್ರಧಾನ ಕಛೇರಿ ವಿಭಾಗಾಧಿಕಾರಿಯಾಗಿದ್ದರು. ಸೋಮವಾರ ಸಂಜೆ ನಿಧನರಾದರು.
ಮಾತೃಭೂಮಿ ದಿನಪತ್ರಿಕೆಯ ವ್ಯಂಗ್ಯಚಿತ್ರ ‘ಎಕ್ಸಿಕ್ಕುಟಿವ್’ ಪಂಕ್ತಿ ರಾಜೀಂದ್ರಕುಮಾರ್ ಅವರದ್ದು. ಅವರ ಕಾರ್ಟೂನ್-ವ್ಯಂಗ್ಯಚಿತ್ರಗಳು ಅಂತರಾಷ್ಟ್ರೀಯ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿವೆ.
2022 ಮತ್ತು 2023 ರಲ್ಲಿ, ರೊಮೇನಿಯಾ, ಬ್ರೆಜಿಲ್ ಮತ್ತು ಟರ್ಕಿಯಲ್ಲಿ ನಡೆದ ಅಂತರರಾಷ್ಟ್ರೀಯ ಕಾರ್ಟೂನ್ ಸ್ಪರ್ಧೆಗಳಲ್ಲಿ ರಾಜೀಂದ್ರ ಕುಮಾರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಎರಡು ತಿಂಗಳ ಹಿಂದೆ ಈಜಿಪ್ಟ್‍ನಲ್ಲಿ ಅಲ್-ಅಝರ್ ಪೋರಂ ನಡೆಸಿದ ಎರಡನೇ ಅಂತಾರಾಷ್ಟ್ರೀಯ ಕಾರ್ಟೂನ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದರು. ಅವರ ವ್ಯಂಗ್ಯಚಿತ್ರಗಳು ವಿವಿಧ ವಿದೇಶ ರಾಷ್ಟ್ರಗಳಲ್ಲಿ ಪ್ರದರ್ಶನಗಳಲ್ಲಿ ಕಾಣಿಸಿಕೊಂಡಿವೆ.
ಕೂತುಪರಂಬ್ ಮಾಂಗಟ್ಟಿಡಂ ಕೆ.ಟಿ.ಗೋಪಿನಾಥ್ (ನಿವೃತ್ತ ಮಾತೃಭೂಮಿ ಸಹ ಸಂಪಾದಕ) ಮತ್ತು ಸಿ.ಶಾರದ ದಂಪತಿಯ ಪುತ್ರ. ಪತ್ನಿ ಮಿನಿ. ಮಕ್ಕಳು: ಮಾಳವಿಕಾ ಮತ್ತು ರಿಷಿಕಾ ಅವರನ್ನು ಅಗಲಿದ್ದಾರೆ.
ಮಾತೃಭೂಮಿ ದಿನಪತ್ರಿಕೆಯಲ್ಲಿ ಮೊನ್ನೆಯಷ್ಟೇ ಪ್ರಕಟವಾದ ರಜೀಂದ್ರಕುಮಾರ್ ಅವರ ಕಾರ್ಟೂನ್ ಸ್ಟ್ರಿಪ್ ಎಕ್ಸಿಕುಟನ್ ಚಿತ್ರ ಜೊತೆಗೆ ಇಲ್ಲಿದೆ.