ನವದೆಹಲಿ: ಎಲ್ಲ ಶ್ರೇಣಿಯ ಹುದ್ದೆಗಳಿಗೆ ಮಹಿಳೆಯರನ್ನು ನೇಮಕ ಮಾಡಬೇಕು ಎಂಬ ತನ್ನ ತತ್ವದಡಿ ಭಾರತೀಯ ನೌಕಾಪಡೆಯು ಮೊದಲ ಮಹಿಳಾ ಕಮಾಂಡಿಂಗ್ ಆಫೀಸರ್ ನೇಮಕ ಮಾಡಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿ ಕುಮಾರ್ ಶುಕ್ರವಾರ ಹೇಳಿದ್ದಾರೆ.
ನವದೆಹಲಿ: ಎಲ್ಲ ಶ್ರೇಣಿಯ ಹುದ್ದೆಗಳಿಗೆ ಮಹಿಳೆಯರನ್ನು ನೇಮಕ ಮಾಡಬೇಕು ಎಂಬ ತನ್ನ ತತ್ವದಡಿ ಭಾರತೀಯ ನೌಕಾಪಡೆಯು ಮೊದಲ ಮಹಿಳಾ ಕಮಾಂಡಿಂಗ್ ಆಫೀಸರ್ ನೇಮಕ ಮಾಡಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿ ಕುಮಾರ್ ಶುಕ್ರವಾರ ಹೇಳಿದ್ದಾರೆ.
ನೌಕಾಪಡೆ ದಿನಕ್ಕೂ ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನೌಕಾಪಡೆಯಲ್ಲಿನ ಒಟ್ಟು ಮಹಿಳಾ ಅಗ್ನಿವೀರರ ಸಂಖ್ಯೆ ಸಾವಿರ ಗಡಿ ದಾಟಿದೆ ಎಂದರು.
ಸನ್ನದ್ಧತೆ: ಕಳೆದ ಒಂದು ವರ್ಷದ ಅವಧಿಯಲ್ಲಿ ನೌಕಾಪಡೆಯು ಕಡಲ ಗಡಿಯ ರಕ್ಷಣೆಗೆ ಸಂಬಂಧಿಸಿ ಕಾರ್ಯಾಚರಣೆ ಸನ್ನದ್ಧತೆಯನ್ನು ಮೇಲ್ದರ್ಜೆಗೇರಿಸಿದೆ. ಈ ಸಂಬಂಧ ಯುದ್ಧನೌಕೆಗಳೂ, ಜಲಾಂತರ್ಗಾಮಿಗಳು ಹಾಗೂ ಯುದ್ಧವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ಮಿಲಿಟರಿ ಚಟುವಟಿಕೆಗಳ ಮೇಲೆ ನೌಕಾಪಡೆ ನಿಗಾ ಇರಿಸಿದೆ ಎಂದು ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
'ಹಿಂದೂ ಮಹಾಸಾಗರ ಗಡಿ ರಕ್ಷಣೆ ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಲು ಒತ್ತು ನೀಡಲಾಗಿದೆ. ಈ ಸಂಬಂಧ ವ್ಯಾಪಕವಾಗಿ ಯುದ್ಧನೌಕೆಗಳು, ಜಲಾಂತರ್ಗಾಮಿಗಳು ಸೇರಿದಂತೆ ಅಗತ್ಯ ರಕ್ಷಣಾ ವ್ಯವಸ್ಥೆಗಳ ನಿಯೋಜನೆ ಮಾಡಲಾಗಿದೆ' ಎಂದು ಅಡ್ಮಿರಲ್ ಆರ್.ಹರಿ ಕುಮಾರ್ ಹೇಳಿದರು.