ತಿರುವನಂತಪುರಂ: ಶಬರಿಮಲೆಯಲ್ಲಿ ಭದ್ರತೆ ಲೋಪ ವಿರೋಧಿಸಿ ಯುವಮೋರ್ಚಾ ಸೆಕ್ರೆಟರಿಯೇಟ್ ಪ್ರತಿಭಟನೆ ನಡೆಯಿತು.
ಈ ವೇಳೆ ಪೋಲೀಸರು ಕಾರ್ಯಕರ್ತರ ಮೇಲೆ ಜಲಫಿರಂಗಿ ಪ್ರಯೋಗಿಸಿದರು. ಯಾವುದೇ ಪ್ರಚೋದನೆ ಇಲ್ಲದೇ ಘೋಷಣೆ ಕೂಗಿದ ಕಾರ್ಯಕರ್ತರು ಹಾಗೂ ಪೋಲೀಸರ ನಡುವೆ ತಳ್ಳಾಟ, ತಿಕ್ಕಾಟ ನಡೆಯಿತು.
ನಂತರ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಘೋಷಣೆ ಕೂಗಿದರು. ನಂತರ ಅವರನ್ನು ಬಂಧಿಸಿ ಬಿಡುಗಡೆಗೊಳಿಸಲಾಯಿತು. ಬಂಧಿತ ಯುವಮೋರ್ಚಾ ರಾಜ್ಯಾಧ್ಯಕ್ಷ ಪ್ರಪುಲ್ ಕೃಷ್ಣ ಅವರನ್ನು ಬಂಧಿಸಲು ಪೆÇಲೀಸರು ನಡೆಸಿದ ಯತ್ನವನ್ನು ಕಾರ್ಯಕರ್ತರು ತಡೆದರು. ಇದರಿಂದ ಸಣ್ಣಪುಟ್ಟ ವಾಗ್ವಾದ ನಡೆದಿದೆ.
ಶಬರಿಮಲೆ ಯಾತ್ರಾರ್ಥಿಗಳಿಗೆ ಸೂಕ್ತ ಭದ್ರತೆ, ಚಿಕಿತ್ಸೆ ನೀಡದಿರುವುದನ್ನು ವಿರೋಧಿಸಿ ಯುವ ಮೋರ್ಚಾ ಮೆರವಣಿಗೆ ನಡೆಸಿತು. ಕಾರ್ಯಕರ್ತರು ಬ್ಯಾರಿಕೇಡ್‍ಗಳನ್ನು ಹತ್ತಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಮುಂದುವರಿಯಲಿದೆ ಎಂದು ಯುವಮೋರ್ಚಾ ತಿಳಿಸಿದೆ. ಶಬರಿಮಲೆ ಯಾತ್ರಾರ್ಥಿಗಳಿಗೆ ಸರ್ಕಾರ ವಂಚನೆ ಮಾಡಿದ್ದು, ಭಾರಿ ವೈಫಲ್ಯ ಉಂಟಾಗಿದೆ ಎಂದು ಆರೋಪಿಸಿ ಸೆಕ್ರೆಟರಿಯೇಟ್ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.