ಪತ್ತನಂತಿಟ್ಟ: ಶಬರಿಮಲೆಯ 18 ಮೆಟ್ಟಲುಗಳಿಗೆ ಹೊಸದಾಗಿ ಅಳವಡಿಸಿರುವ ಹೈಡ್ರಾಲಿಕ್ ಮೇಲ್ಛಾವಣಿಯ ಬಗ್ಗೆ ಇದೀಗ ಸ್ವತಃ ಪೋಲೀಸರೂ ಭಿನ್ನಸ್ವರ ಹೊರಡಿಸಿದ್ದಾರೆ. ಮೇಲ್ಛಾವಣಿ ನಿರ್ಮಾಣಕ್ಕೆ ಹಾಕಿರುವ ಕಲ್ಲಿನ ಕಂಬಗಳು ಯಾತ್ರಾರ್ಥಿಗಳಿಗೆ ಮೆಟ್ಟಿಲು ಹತ್ತಲು ಅಡ್ಡಿಯಾಗುತ್ತಿದೆ ಎಂದು ಪೋಲೀಸರು ದೂರಿದ್ದಾರೆ.
ಈ ವಿಷಯವನ್ನು ದೇವಸ್ವಂ ಮಂಡಳಿಗೆ ತಿಳಿಸಲಾಗಿದೆ ಎಂದು ಪತ್ತನಂತಿಟ್ಟ ಜಿಲ್ಲಾ ಪೋಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. 18 ಮೆಟ್ಟಿಲು ಮೂಲಕ ಭಕ್ತಾದಿಗಳನ್ನು ಕರೆದೊಯ್ಯುವಲ್ಲಿ ಪೆÇಲೀಸರು ನಿಧಾನ ಮಾಡುತ್ತಿದ್ದಾರೆ ಎಂಬ ದೇವಸ್ವಂ ಮಂಡಳಿ ಆರೋಪಕ್ಕೆ ಪೆÇಲೀಸರು ಈ ಕಾರಣದ ಉತ್ತರ ನೀಡಿದ್ದಾರೆ.
ಯೋಜನೆಯು ಕೆತ್ತಿದ ಕಲ್ಲಿನ ಕಂಬಗಳ ಮೇಲೆ ಮಡಿಸುವ ಛಾವಣಿಯನ್ನು ಒಳಗೊಂಡಿದೆ. ಮಳೆ ಮತ್ತು ಗಾಳಿಯ ವಾತಾವರಣದಲ್ಲಿ ಪಡಿಪೂಜೆ ನೆರವೇರಿಸಲು ಪ್ರಾಯೋಗಿಕವಾಗಿ ತೊಂದರೆಯಾದ ಕಾರಣ ಹದಿನೆಂಟನೇ ಮೆಟ್ಟಿಲ ಮೇಲೆ ತಾತ್ಕಾಲಿಕ ಹೈಡ್ರಾಲಿಕ್ ಮೇಲ್ಛಾವಣಿಯನ್ನು ಅಳವಡಿಸಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ನೀಡಿದ ವಿವರಣೆ. ಜೋರು ಮಳೆಯ ಸಂದರ್ಭದಲ್ಲಿ ಯಾತ್ರಾರ್ಥಿಗಳು ಮೆಟ್ಟಿಲು ಹತ್ತಲು ಸಾಧ್ಯವಾಗದ ಪರಿಸ್ಥಿತಿಯನ್ನು ತಪ್ಪಿಸುವ ಉದ್ದೇಶದಿಂದ ಕಾಮಗಾರಿ ಆರಂಭಿಸಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಅಪೂರ್ಣ ಪಿಲ್ಲರ್‍ಗಳಿಂದ ತೊಂದರೆ ಉಂಟಾಗುತ್ತಿದೆ ಎನ್ನುತ್ತಾರೆ ಪೆÇಲೀಸರು.
ನಿನ್ನೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಒಂದು ನಿಮಿಷದಲ್ಲಿ ಕನಿಷ್ಠ 75 ಜನರನ್ನು ಕರೆದುಕೊಂಡು ಹೋಗುವಂತೆ ದೇವಸ್ವಂ ಮಂಡಳಿ ಆಗ್ರಹಿಸಿತ್ತು. ಇದಾದ ಬಳಿಕ ಅದು ಸಾಧ್ಯವಿಲ್ಲ ಎಂದು ಎಡಿಜಿಪಿ ತಿಳಿಸಿದ್ದಾರೆ. ಹೀಗಾಗಿ ಪೋಲೀಸರಿಗೆ ಕಷ್ಟವಾಗಿರುವ ಕಲ್ಲಿನ ಕಂಬಗಳನ್ನು ಬದಲಾಯಿಸಬೇಕಿದೆ. ಈ ಕಲ್ಲಿನ ಕಂಬಗಳ ವಿರುದ್ಧ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಸರ್ಕಾರ ಮತ್ತು ದೇವಸ್ವಂ ಮಂಡಳಿಯಿಂದ ವಿವರಣೆ ಕೇಳಿತ್ತು. ಹೈದರಾಬಾದ್ ಮೂಲದ ಕಂಪನಿಯು ಹೈಡ್ರಾಲಿಕ್ ಛಾವಣಿಗಳನ್ನು ಕೊಡುಗೆಯಾಗಿ ತಯಾರಿಸುತ್ತಿದೆ.