ಕೋಝಿಕ್ಕೋಡ್: ವಿಕಲಚೇತನ ಮಕ್ಕಳೊಂದಿಗೆ ಪೋಷಕರಿಗೆ ಬದುಕಲು ದಾರಿ ಕಲ್ಪಿಸಲು ಸರ್ಕಾರ ರೂಪಿಸಿರುವ ಸಹಾಯಕ ಗ್ರಾಮಗಳ ಮೊದಲ ಹಂತ ಘೋಷಿಸಲಾಗಿದೆ.
ಕಾಸರಗೋಡು ಜಿಲ್ಲೆಯ ಮುಳಿಯಾರ್ ಮತ್ತು ಉದುಮ, ಮಲಪ್ಪುರಂ ಜಿಲ್ಲೆಯ ನಿಲಂಬೂರು, ಕೊಲ್ಲಂ ಜಿಲ್ಲೆಯ ಪುನಲೂರು ಮತ್ತು ತಿರುವನಂತಪುರ ಜಿಲ್ಲೆಯ ಕಾಟ್ಟಾಕ್ಕಡದಲ್ಲಿ ವಿಕಲಚೇತನರ ಸಹಾಯಕ ಗ್ರಾಮಗಳು ಬರಲಿವೆ ಎಂದು ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಇಲಾಖೆ ಸಚಿವ ಪಿ. ಮುಹಮ್ಮದ್ ರಿಯಾಝ್ ಮಾಹಿತಿ ನೀಡಿದರು.
ಕೋಝಿಕ್ಕೋಡ್‍ನ ಜೆಂಡರ್ ಪಾರ್ಕ್‍ನಲ್ಲಿ ಮಂಗಳವಾರ ನಡೆದ ರಾಜ್ಯ ಮಟ್ಟದ ಪ್ರಶಸ್ತಿ ವಿತರಣಾ ಕಾರ್ಯಕ್ರಮ-ಉಣರ್ವ್ 2023-ನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
ಕೇರಳದಲ್ಲಿ ಪ್ರವಾಸಿ ಕೇಂದ್ರಗಳು ಮತ್ತು ಹೊಸದಾಗಿ ನಿರ್ಮಿಸಲಾದ ಕಟ್ಟಡಗಳನ್ನು ಅಂಗವಿಕಲರ ಸ್ನೇಹಿಯಾಗಿಸಲು ಸೂಚನೆ ನೀಡಲಾಗಿದೆ ಎಂದು ಎರಡೂ ಇಲಾಖೆಗಳ ಉಸ್ತುವಾರಿ ಸಚಿವರು ತಿಳಿಸಿದರು.