ತಿರುವನಂತಪುರಂ: ರಾಜ್ಯಕ್ಕೆ ಮರಳಿದ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ವಿರುದ್ಧ ಮತ್ತೊಮ್ಮೆ ಕಪ್ಪು ಬಾವುಟ ಪ್ರತಿಭಟನೆ ನಡೆದಿದೆ. ತಿರುವನಂತಪುರಂ ಪಾಳಯಂ ಜನರಲ್ ಆಸ್ಪತ್ರೆ ಜಂಕ್ಷನ್ ಬಳಿ ಎಸ್‍ಎಫ್‍ಐ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ನಾಲ್ವರು ಕಾರ್ಯಕರ್ತರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ತಿರುವನಂತಪುರಂ ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ರಾಜ್ಯಪಾಲರು ತೆರಳುತ್ತಿದ್ದ ಮಾರ್ಗದಲ್ಲಿ ಪ್ರತಿಭಟನೆ ನಡೆದಿದೆ. ಎಸ್‍ಎಫ್‍ಐ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಆರಿಫ್ ಮುಹಮ್ಮದ್ ಖಾನ್ ಗೋ ಬ್ಯಾಕ್ ಎಂದು ಘೋಷಣೆ ಕೂಗಿದರು.
ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ರಾಜ್ಯಪಾಲರು ದೆಹಲಿಯಿಂದ ಕೇರಳಕ್ಕೆ ಮರಳಿದರು. ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವೆ ತೀವ್ರ ವಾಗ್ವಾದ ನಡೆದಿರುವ ಹಿನ್ನೆಲೆಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮಂಜುಗಡ್ಡೆಗೆ ವೇದಿಕೆಯಾಗಲಿದೆ ಎಂಬ ಊಹಾಪೆÇೀಹಗಳ ನಡುವೆಯೇ ಮತ್ತೆ ಎಸ್‍ಎಫ್‍ಐ ಪ್ರತಿಭಟನೆಗೆ ಮುಂದಾಗಿದೆ.
ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯಪಾಲರು, ಎಸ್‍ಎಫ್‍ಐ ಪ್ರತಿಭಟನೆ ಮುಂದುವರಿದರೆ ವಾಹನದಿಂದ ಇಳಿಯುವುದಾಗಿಯೂ ಹೇಳಿದ್ದಾರೆ. ಈ ಹಿಂದೆ ತಮ್ಮ ವಿರುದ್ಧ ನಡೆದ ಪ್ರತಿಭಟನೆ ಹಾಗೂ ವಾಹನದ ಮೇಲಿನ ಹಿಂಸಾಚಾರದಲ್ಲೂ ಕ್ರಮ ಕೈಗೊಳ್ಳದಿರುವುದನ್ನು ಟೀಕಿಸಿದ್ದರು. ಇದಾದ ಕೂಡಲೇ ಎಸ್‍ಎಫ್‍ಐ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು.
.