ಕೋಝಿಕ್ಕೋಡ್: ಕ್ಯಾಲಿಕಟ್ ವಿಶ್ವವಿದ್ಯಾನಿಲಯ ಕ್ಯಾಂಪಸ್‍ನಲ್ಲಿ ಎಸ್‍ಎಫ್‍ಐ ಹಾರಿಸಿದ ಕಪ್ಪು ಬ್ಯಾನರ್ ಹಿಂದೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೈವಾಡವಿದೆ ಎಂದು ರಾಜಭವನ ಹೇಳಿದೆ.
ಮುಖ್ಯಮಂತ್ರಿಗೆ ತಿಳಿಯದೆ ಎಸಸ್‍ಎಫ್‍ಐ ಕಪ್ಪು ಬ್ಯಾನರ್ ಕಟ್ಟಿಲ್ಲ ಎಂದು ರಾಜಭವನ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ರಾಜ್ಯದ ಆಡಳಿತ ವ್ಯವಸ್ಥೆ ಕುಸಿಯಲಾರಂಭಿಸಿದೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಖುದ್ದು ಮಧ್ಯ ಪ್ರವೇಶಿಸಿ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ರಾಜ್ಯಪಾಲರ ವಿರುದ್ಧ ಎಸ್‍ಎಫ್‍ಐ ಎತ್ತಿದ ಕಪ್ಪು ಬ್ಯಾನರ್ ತೆಗೆಸಿದ್ದರು. ಆದರೆ ಎಸ್‍ಎಫ್‍ಐ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿ, ತೆಗೆದಿದ್ದ ಬ್ಯಾನರ್‍ಗಳನ್ನು ಮತ್ತೆ ನೇತು ಹಾಕುವ ಪ್ರಯತ್ನ ನಡೆಸಿದರು. ಇದಾದ ನಂತರವೇ ಮುಖ್ಯಮಂತ್ರಿ ವಿರುದ್ಧ ರಾಜಭವನ ಹ|ಏ|ಳಿಕೆ ಹೊರಡಿಸಿದೆ.
ನಿನ್ನೆ ಮಧ್ಯಾಹ್ನದ ಸುಮಾರಿಗೆ ಎಸ್‍ಎಫ್‍ಐ ಕಾರ್ಯಕರ್ತರು ಕಟ್ಟಿದ್ದ ಬ್ಯಾನರ್‍ಗಳನ್ನು ತೆಗೆಯುವಂತೆ ರಾಜ್ಯಪಾಲರು ಪೋಲೀಸರಿಗೆ ಸೂಚಿಸಿದ್ದರು. ಆದರೆ ರಾಜ್ಯಪಾಲರ ಸೂಚನೆಯನ್ನು ಪೋಲೀಸರು ಪಾಲಿಸಲಿಲ್ಲ. ಈ ವಿಷಯ ತಿಳಿದ ರಾಜ್ಯಪಾಲರು ನೇರವಾಗಿ ಮಧ್ಯಪ್ರವೇಶಿಸಿ ಪೋಲೀಸರನ್ನು ಕರೆಸಿ ಬ್ಯಾನರ್ ತೆರವು ಮಾಡಿದರು. ಆರಿಫ್ ಮುಹಮ್ಮದ್ ಖಾನ್ ಅವರ ವಿರುದ್ದ ಎಸ್‍ಎಫ್‍ಐಗೆ ಬ್ಯಾನರ್‍ಗಳನ್ನು ನೇತುಹಾಕಲು ಅನುಮತಿ ನೀಡಿದ್ದಕ್ಕಾಗಿ ಉಪಕುಲಪತಿಯಿಂದ ವಿವರಣೆ ಕೇಳುವಂತೆ ರಾಜಭವನವು ಸೂಚಿಸಿದೆ.