ಕಣ್ಣೂರು: ಮೂಝಿವಾಯಲ್ ನಲ್ಲಿ ಕೃಷಿ ವಸ್ತುಗಳನ್ನು ವಿಂಗಡಿಸುವಾಗ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.
ಅಸ್ಸಾಂ ಮೂಲದ ಸಯೀದ್ ಅಲಿ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ. 8 ಜನ ಅನ್ಯ ರಾಜ್ಯ ಕಾರ್ಮಿಕರು ಬಾಡಿಗೆ ಮನೆಯಲ್ಲಿದ್ದರು. ಇಲ್ಲಿಗೆ ತಂದಿದ್ದ ಕೃಷಿ ತ್ಯಾಜ್ಯ ಸಾಮಾನುಗಳಲ್ಲಿದ್ದ ಬಾಟಲಿಯನ್ನು ತೆರೆಯುವಾಗ ಸ್ಫೋಟಗೊಂಡಿದೆ. ಅಪಘಾತದಲ್ಲಿ ಸಯೀದ್ ಅಲಿ ಅವರ ಕೈ ಮತ್ತು ಕಣ್ಣಿಗೆ ಗಂಭೀರ ಗಾಯಗಳಾಗಿವೆ. ಮಕ್ಕಳ ಗಾಯ ಗಂಭೀರವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆ ಕುರಿತು ಪೆÇಲೀಸರು ತನಿಖೆ ಆರಂಭಿಸಿದ್ದಾರೆ.