HEALTH TIPS

ಈ ಬಾರಿಯ ರಾಜ್ಯಮಟ್ಟದ ಶಾಲಾ ಕಲೋತ್ಸವ ಆಡಂಬರ ರಹಿತಗೊಳಿಸಲು ಸರ್ಕಾರ ಚಿಂತನೆ: ಹಣಕಾಸಿನ ಮುಗ್ಗಟ್ಟು ತೀವ್ರ

               ತಿರುವನಂತಪುರಂ: ರಾಜ್ಯದಲ್ಲಿ ಹೆಚ್ಚುತ್ತಿರುವ ಸಾಲದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ರಾಜ್ಯ ಶಾಲಾ ಕಲೋತ್ಸವಕ್ಕೆ ಆಡಂಬರದ ವ್ಯವಸ್ಥೆಗಳು ಬೇಡವೆಂಬ ನಿಲುವಿನತ್ತ ಸರ್ಕಾರ ಸಾಗಿದೆ. 

                 ಈ ಬಾರಿ ಮುಖ್ಯ ವೇದಿಕೆ ಪರಿಸರದಲ್ಲಿ ಮಾತ್ರ ಚಪ್ಪರ ನಿರ್ಮಿಸಲು ಯೋಜಿಸಲಾಗಿದೆ. ಜನವರಿ 4 ರಿಂದ 8 ರವರೆಗೆ ಕೊಲ್ಲಂನಲ್ಲಿ ಕಲೋತ್ಸವ ನಡೆಸಲು ವ್ಯವಸ್ಥೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

            ಈ ಬಾರಿ ಕೊಲ್ಲಂನ 24 ಸ್ಥಳಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಇವುಗಳಲ್ಲಿ 16 ಸ್ಥಳಗಳು ಸಾರ್ವಜನಿಕ ಶಾಲೆಗಳಾಗಿವೆ. ವೆಚ್ಚ ಕಡಿತದ ಜೊತೆಗೆ ಪರಮವಾಧಿ ಸಾರ್ವಜನಿಕ ಶಾಲೆಗಳ ಭಾಗವಹಿಸುವಿಕೆಯನ್ನು ಖಚಿತಪಡಿಸುವುದು ಗುರಿಯಾಗಿದೆ ಎಂದು ವಾದಿಸಲಾಗಿದೆ. ಭಾಗವಹಿಸುವ ಎಲ್ಲ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಲು ಸಂಘಟನಾ ಸಮಿತಿ ನಿರ್ಧರಿಸಿದೆ. ಪ್ರಾಯೋಜಕರ ಸಹಾಯದಿಂದ 14,000 ಸ್ಮರಣಿಕೆಗಳನ್ನು ಸಿದ್ಧಪಡಿಸಲಾಗಿದೆ. ಹೆಚ್ಚು ಅಂಕಗಳನ್ನು ಪಡೆದ ಶಾಲೆಗಳು ಮತ್ತು ಜಿಲ್ಲೆಗಳಿಗೆ 40 ಟ್ರೋಫಿಗಳನ್ನು ನೀಡಲಾಗುತ್ತದೆ.

              ತೇವಳ್ಳಿ ಸರ್ಕಾರಿ ಶಾಲಾ ಕಲಾ ಉತ್ಸವದ ಕಛೇರಿಯು ಬಾಲಕರ ಪ್ರೌಢಶಾಲೆಯಲ್ಲಿರಲಿದೆ. ಶಾಲೆಗಳ ಹೊರಗಿನ ಸ್ಥಳಗಳು ಸಿಎಸ್‍ಐ ಕನ್ವೆನ್ಷನ್ ಸೆಂಟರ್, ಆಶ್ರಮ ದೇವಸ್ಥಾನದ ಓಪನ್ ಏರ್ ಆಡಿಟೋರಿಯಂ, ಆಯತಿಲ್ ಪುಲಿಯಾತುಮುಕ್‍ನಲ್ಲಿರುವ ಎಸ್‍ಆರ್ ಆಡಿಟೋರಿಯಂ, ಕಡಪಕ್ಕಡ ಸ್ಪೋಟ್ರ್ಸ್ ಕ್ಲಬ್ ಮತ್ತು ಸೋಪಾನಂ ಆಡಿಟೋರಿಯಂ ನಲ್ಲಿರಲಿದೆ. ಮುಖ್ಯ ಸ್ಥಳದಲ್ಲಿ ಪ್ರತಿ ದಿನ ಒಂದು ಏಕ ಕಾರ್ಯಕ್ರಮ ಮತ್ತು ಒಂದು ಗುಂಪು ಸ್ಪರ್ಧೆಗಳಿರಲಿವೆ. . ಸೋಪಾನಂ ಆಡಿಟೋರಿಯಂನಲ್ಲಿ ನಾಟಕ ಸ್ಪರ್ಧೆಗಳು ನಡೆಯುತ್ತವೆ. ಭಾಗವಹಿಸುವವರಿಗೆ ಗರಿಷ್ಠ ಶಾಲೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ನಗರದಲ್ಲಿ 12 ಶಾಲೆಗಳನ್ನು ಗುರುತಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries