ಬದಿಯಡ್ಕ: ಪೆರಡಾಲ ಉದನೇಶ್ವರ ದೇವರ ವಾರ್ಷಿಕ ಧನು ಸಂಕ್ರಮಣ ಹಾಗೂ ಜಾತ್ರಾ ಮಹೋತ್ಸವವು ಶನಿವಾರದಂದು ಅನೇಕ ಸಾಂಸ್ಕøತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಿತು. ಸಾವಿರಾರು ಜನರು ಶ್ರೀದೇವರ ಸೇವೆ ಮಾಡಿ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿದರು. ಈ ಮಹೋತ್ಸವದ ಪ್ರಯುಕ್ತ ಭಜನೆ, ತಾಳಮದ್ದಳೆ, ಯಕ್ಷಗಾನ, ಗಾನಮೇಳ ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ವತಿಯಿಂದ ನಡೆದ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮವು ನೆರೆದಿರುವ ಬಹು ಸಂಖ್ಯೆಯ ಕಲಾ ಪ್ರೇಕ್ಷಕರನ್ನು, ಭಕ್ತಾಭಿಮಾನಿಗಳನ್ನು ಮನ ರಂಜಿಸುವಲ್ಲಿ ಯಶಸ್ವಿಯಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಸಮಗ್ರ ನಿರೂಪಣೆ ಮತ್ತು ಸಾಹಿತ್ಯ ಪ್ರಸ್ತುತಿಯನ್ನು ಡಾ. ವಾಣಿಶ್ರೀ ಕಾಸರಗೋಡು ಅವರು ನೆರವೇರಿಸಿದರು. ಸಂಸ್ಥೆಯ ಅಪ್ರತಿಮ ಕಲಾವಿದರಾದ ಗುರುರಾಜ್ ಕಾಸರಗೋಡು, ಮಧುಲತಾ ಮನೋಜ್, ಸನುμÁ ಸುಧಾಕರನ್, ಅಹನಾ ಎಸ್ ರಾವ್, ಶ್ರೀರಕ್ಷಾ ಸರ್ಪoಗಳ, ಧನ್ವಿತ್ ಕೃಷ್ಣ, ಶ್ರದ್ಧಾ ಎ ಎಸ್, ವμರ್Á ಶೆಟ್ಟಿ, ಮೇಧಾ ಎ ಎಸ್, ಸನುμÁ ಸುನಿಲ್, ಉμÁ ಸುಧಾಕರನ್, ರಚಿತಾ ಕೆ ರಾವ್, ಶ್ರೀಷ್ಣ ಜಿ ಎಸ್, ಪ್ರಜ್ಞಾ ಎ, ಸಾನ್ವಿ, ನವ್ಯಶ್ರೀ ಕುಲಾಲ್, ದಿಯಾ ಸುಕೇಶ್ ಗಟ್ಟಿ, ಹನ್ಶಿತ್ ಕುಲಾಲ್, ರಕ್ಷಿತಾ ಕೆ, ಅಮೃತಾ, ಆರ್ಯ ಕೆ ರಾವ್, ಲಯಾ ಭಾನ್ವಿ ಕುಲಾಲ್, ಅಕ್ಷತಾ ಎಂ, ಶ್ರೀ ರಕ್ಷಾ ಎಂ ಎಸ್, ಕೀರ್ತಿಪ್ರಭ ಬಿ ಜಿ ಮುಂತಾದವರು ತಮ್ಮ ತಮ್ಮ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸಿ ಜನ ಮೆಚ್ಚುಗೆ ಗಳಿಸಿದರು ಭಾಗವಹಿಸಿದ ಎಲ್ಲಾ ಕಲಾವಿದರಿಗೆ ಸಂಸ್ಥೆಯ ವತಿಯಿಂದ ನೆನಪಿನ ಕಾಣಿಕೆಯಾಗಿ ಗೌರವ ಸ್ಮರಣಿಕೆ ಫಲಕ ನೀಡಿ ಗೌರವಿಸಲಾಯಿತು. ದೇವಸ್ಥಾನದ ಆಡಳಿತ ವರ್ಗದವರಾದ ಶ್ರೀಯುತ ವೆಂಕಟರಮಣ ಭಟ್ ಹಾಗೂ ಶ್ರೀಯುತ ನಿರಂಜನ್ ರೈ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಲಾವಿದರಿಗೆ ಸ್ಮರಣಿಕೆ ನೀಡುವಲ್ಲಿ ಸಹಕರಿಸಿದರು ಹಾಗೂ ಸಂಸ್ಥೆ ನಡೆಸಿರುವ ಸಾಹಿತ್ಯ ಗಾನ ನೃತ್ಯ ವೈಭವ ಕಾರ್ಯಕ್ರಮಕ್ಕೆ ಧನ್ಯವಾದ ರೂಪದಲ್ಲಿ ಶ್ರೀ ದೇವರ ಪ್ರಸಾದ ಹಾಗೂ ಸ್ಮರಣಿಕೆ ನೀಡಿ ಸಂಸ್ಥೆಯ ಅಧ್ಯಕ್ಷರು ಡಾ. ವಾಣಿಶ್ರೀ ಕಾಸರಗೋಡು ಹಾಗೂ ಕಾರ್ಯದರ್ಶಿ ಗುರುರಾಜ್ ಕಾಸರಗೋಡು ಅವರನ್ನು ಗೌರವಿಸಿದರು.