ಕಾಸರಗೋಡು: ಶಿವಗಿರಿ ಮಠದ ಏಕೈಕ ಪೋಷಕ ಸಂಘಟನೆಯಾಘಿರುವ ಗುರುಧರ್ಮ ಪ್ರಚಾರ ಸಭೆಯ ಕಾಸರಗೋಡು ಜಿಲ್ಲಾ ಸಮಿತಿ ರಚನಾ ಸಭೆ ನೀಲೇಶ್ವರ ವ್ಯಾಪಾರಿ ಸಭಾ ಭವನದಲ್ಲಿ ಜರುಗಲಿತು. ಗುರುಭಕ್ತರನ್ನೊಳಗೊಂಡ ಜಿಲ್ಲಾ ನಾಯಕತ್ವ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಶಿವಗಿರಿ ಮಠದ ಸ್ವಾಮಿ ಸುರೇಶ್ವರಾನಂದ ಸಮಾರಂಭ ಉದ್ಘಾಟಿಸಿದರು.
ಈ ಸಂದರ್ಭ ಆಶೀರ್ವಚನ ನೀಡಿದ ಅವರು, ಶಿವಗಿರಿ ಧರ್ಮಸಂಘದ ಟ್ರಸ್ಟ್ ಅಧೀನದಲ್ಲಿ ಇತರ ಜಿಲ್ಲೆಗಳಂತೆ ಉತ್ತರದ ಜಿಲ್ಲೆಯಲ್ಲೂ ಶಾಲಾ-ಕಾಲೇಜು ಸ್ಥಾಪಿಸಲು ಸಂಘಟನೆ ಮುಂದಾಗಬೇಕು. ಬ್ರಹ್ಮಶ್ರೀ ನಾರಾಯಣ ಗುರುದೇವರ ಸತ್ಯದರ್ಶನವನ್ನು ವಿಶ್ವಾದ್ಯಂತ ಪ್ರಚಾರಪಡಿಸುವ ಕಾರ್ಯವನ್ನು ಪ್ರತಿಯೊಬ್ಬರು ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭ ಜಿಡಿಪಿಎಸ್ ಸದಸ್ಯತ್ವ ವಿತರಣಾ ಕಾರ್ಯಕ್ರಮವನ್ನು ಸ್ವಾಮಿ ಸುರೇಶ್ವರಾನಂದ ಉದ್ಘಾಟಿಸಿದರು. ಉದಿನೂರು ಸುಕುಮಾರನ್ ಅಧ್ಯಕ್ಷತೆ ವಹಿಸಿದ್ದರು. ಜಿ.ಡಿ.ಪಿಎಸ್ ಜಂಟಿ ರಿಜಿಸ್ಟ್ರಾರ್ ಸಿ. ಟಿ ಅಜಯಕುಮಾರ್ ವರದಿ ಮಂಡಿಸಿದರು. ಮಾತೃಸಭಾ ಕೇಂದ್ರ ಸಮಿತಿ ಉಪಾಧ್ಯಕ್ಷ ಪಿ.ಕೆ. ಗೌರಿ ಟೀಚರ್, ಮಾತೃಸಭಾ ಕೇಂದ್ರ ಸಮಿತಿ ಸದಸ್ಯೆ ಸೀನಾ ಸುರ್ಜಿತ್, ವಕೀಲ ಕೆ. ಸಿ ಸಸೀಂದ್ರನ್, ಪ್ರಸಾದ್ ಶಾಂತಿ ಮತ್ತು ಆನಂದನ್ ಚಾಯೋತ್ ಉಪಸ್ಥಿತರಿದ್ದರು. ವಿನೋದ್ ಅತ್ತಿಪ ಸ್ವಾಗತಿಸಿದರು. ವಿ. ಮಧು ಬಂಗಳಂ ವಂದಿಸಿದರು. ಜಿಡಿಪಿಎಸ್ ಸದಸ್ಯತ್ವ ವಿತರಣಾ ಸಮಿತಿಪದಾಧಿಕಾರಿಳ ಆಯ್ಕೆ ನಡೆಸಲಾಯಿತು.
ಶಿವಗಿರಿ ಮಠದ ಸ್ವಾಮಿ ಸುರೇಶ್ವರಾನಂದ ಅವರು ವಕೀಲ ಸಿ. ಶಶೀಂದ್ರನ್ ಅವರಿಗೆ ನೀಡುವ ಮೂಲಕ ಸದಸ್ಯತ್ವ ವಿತರಣೆಯನ್ನು ಉದ್ಘಾಟಿಸಿದರು.