ಕಾಸರಗೋಡು: ಶಾಲೆಯಲ್ಲೂ, ಪರಿಸರದಲ್ಲೂ ಮಾಲಿನ್ಯ ರಾಶಿ ಬಿದ್ದಿರುವುದರಿಂದ ಕಾಸರಗೋಡು ಬಿಇಎಂ ಹೈಸ್ಕೂಲ್‍ಗೆ ಮಾಲಿನ್ಯ ಸಂಸ್ಕರಣೆ ರಂಗದಲ್ಲಿ ಕಾನೂನು ಉಲ್ಲಂಘನೆಯನ್ನು ತನಿಖೆ ನಡೆಸುವ ಜಿಲ್ಲಾ ಎನ್‍ಫೆÇೀರ್ಸ್‍ಮೆಂಟ್ ಸ್ಕ್ವಾಡ್ 10 ಸಾವಿರ ರೂ. ದಂಡ ವಿ„ಸಲು, ಪ್ಲಾಸ್ಟಿಕ್ ಮಾಲಿನ್ಯವನ್ನು ರಾಶಿ ಹಾಕಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ರಾಂದೇವ್ ಕಾಂಪ್ಲೆಕ್ಸ್ ಸಂಸ್ಥೆಗೆ 10 ಸಾವಿರ ರೂ. ದಂಡ ವಿಧಿಸಿ ಕ್ರಮ ಕೈಗೊಳ್ಳಲು ಕಾಸರಗೋಡು ನಗರಸಭೆಗೆ ನಿರ್ದೇಶ ನೀಡಿದೆ. ಜಿಲ್ಲಾ ಎನ್‍ಫೆÇೀರ್ಸ್‍ಮೆಂಟ್ ಸ್ಕ್ವಾಡ್ ಲೀಡರ್ ಪಿ.ವಿ.ಶಾಜಿ, ಎನ್‍ಫೆÇೀರ್ಸ್‍ಮೆಂಟ್ ಸದಸ್ಯರಾದ ಇ.ಕೆ.ಫಾಸಿಲ್, ಎಂ.ಎ.ಮುದಸ್ಸಿರ್, ಕಾಸರಗೋಡು ನಗರಸಭಾ ಪಬ್ಲಿಕ್ ಹೆಲ್ತ್ ಇನ್ಸ್‍ಪೆಕ್ಟರ್ ಟಿ.ಅಂಬಿಕಾ ಮೊದಲಾದವರು ಪರಿಶೋಧಿಸಿದರು.