ಕಾಸರಗೋಡು: ಜನವರಿ 4 ರಿಂದ ರಾಂಚಿಯಲ್ಲಿ ನಡೆಯವ ಅಂತರ್ ರಾಜ್ಯ ಏಕ ದಿನ ಕ್ರಿಕೆಟ್ ಪಂದ್ಯಾಟದಲ್ಲಿ ಕೇರಳ ಸೀನಿಯರ್ ಮಹಿಳಾ ತಂಡದಲ್ಲಿ ದಿವ್ಯಾ ಗಣೇಶ್ ಸ್ಥಾನ ಗಿಟ್ಟಿಸಿದ್ದಾರೆ. ಕಾಂಞಂಗಾಡ್ ನಿವಾಸಿ, ಮಾಜಿ ಕೆ.ಸಿ.ವಯನಾಡು ಕ್ರಿಕೆಟ್ ಅಕಾಡೆಮಿಯ ಉತ್ತಮ ಆಲ್‍ರೌಂಡರ್ ಆಗಿರುವ ದಿವ್ಯಾ ಗಣೇಶ್ ಅಂಡರ್-19, ಅಂಡರ್-23 ಕ್ಯಾಟಗರಿಯಲ್ಲೂ, ಸೀನಿಯರ್ ತಂಡದಲ್ಲೂ ಈ ಮೊದಲು ಕೇರಳ ತಂಡದಲ್ಲಿ ಆಡಿದ್ದರು. ದಿವ್ಯಾ ಗಣೇಶ್ ಅವರನ್ನು ಕಾಸರಗೋಡು ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್ ಅಭಿನಂದಿಸಿದೆ.