ಮುಳ್ಳೇರಿಯ: ಕಾಸರಗೋಡು ಕಂದಾಯ ಜಿಲ್ಲಾ 62ನೇ ಶಾಲಾ ಕಲೋತ್ಸವ ಮುಳ್ಳೇರಿಯದ ಕಾರಡ್ಕ ಶಾಲೆಯಲ್ಲಿ ನಡೆಯಲಿದ್ದು ಉತ್ಸವದ ಆಗಮನವನ್ನು ಪ್ರಕಟಿಸಲು ಫ್ಲ್ಯಾಶ್ ಮಾಬ್ ನಡೆಯಿತು. ಡಿ.5 ರಿಂದ 9 ರವರೆಗೆ ಕಾರಡ್ಕ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಜಿಲ್ಲಾ ಶಾಲಾ ಕಲೋತ್ಸವ ಅಭಿಯಾನದ ಅಂಗವಾಗಿ ಫ್ಲಾಶ್ ಮಾಬ್ ನಡೆಸಲಾಯಿತು.
ಬೋವಿಕ್ಕಾನ, ಚೆರ್ಕಳ, ಕಾಸರಗೋಡು ಹೊಸ ಬಸ್ ನಿಲ್ದಾಣ, ಬದಿಯಡ್ಕ, ಮುಳ್ಳೇರಿಯ ಮತ್ತು ಕರ್ಮಂತ್ತೋಡಿಯಲ್ಲಿ ಹೈಸ್ಕೂಲ್ ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿದರು. ಬೋವಿಕ್ಕಾನದಲ್ಲಿ ನಡೆದ ಕಾರ್ಯಕ್ರಮವನ್ನು ಮುಳಿಯಾರ್ ಪಂಚಾಯತಿ ಅಧ್ಯಕ್ಷೆ ಪಿ.ವಿ.ಮಿನಿ ಉದ್ಘಾಟಿಸಿದರು. ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಇ.ಮೋಹನನ್, ಶಿಹಾಬ್, ಎ.ರಾಜೇಶ್ ಕುಮಾರ್, ರಜಿತ್ ಕಾರಡ್ಕ ಮತ್ತಿತರರು ಮಾತನಾಡಿದರು. ಕೆ.ಸನೀಶ್ ಕುಮಾರಿ, ಎಂ.ಶೈಮಾ, ಕೆ.ವಿ.ಲಿಖಿತಾ, ಸಿ.ಸೂರ್ಯ, ಎಸ್.ಕೀರ್ತನಾ, ಎಂ.ದೀಕ್ಷಾ, ಪಿ.ಎನ್.ದಿಯಾ, ಪಿ.ನಿಜಿಶಾ, ಸಿ.ಜೆ.ಅರ್ಚನಾ, ವರ್ಷ ಚಂದ್ರನ್, ಎಂ.ಸಂಧ್ಯಾ, ಪಿ.ಅನುಪ್ರಿಯಾ, ಶ್ರೀವರ್ಷ, ಡಿ.ಪೂರ್ಣಿಮಾ , ಶರಣ್ಯ, ಕಾವ್ಯಶ್ರೀ, ಸಿ.ಧನ್ಯಶ್ರೀ, ಬಿ.ಜ್ಯೋತಿಕಾ ಮತ್ತು ವಿ.ಬಸ್ಮಿತಾ ಫ್ಲಾಶ್ ಮಾಬ್ ಪ್ರಸ್ತುತಪಡಿಸಿದರು. ಮಂಜುಳಾ ಕುಮಾರಿ, ಸಿ.ಶಶಿ, ಎಂ.ಉμÁ, ಕೆ.ರತೀಶ್, ಕನಕಂ ತೆಕ್ಕೆÉಪಡಿಕಲ್, ದೀಪಾ, ಉದಯನ್ ಕಾರಡ್ಕ, ಗೋಕುಲ್ ಕೊಟ್ಟಂಗುಳಿ, ಶ್ರೀಕಾಂತ್ ನೇತೃತ್ವ ವಹಿಸಿದ್ದರು.