ಕಾಸರಗೋಡು: ಎಂಟು ದಿನಗಳ ಸಂಭ್ರಮದ ಬೇಕಲ್ ಫೆಸ್ಟ್ ಎಲ್ಲರೂ ಒಂದೆಡೆ ಸೇರಿ ಕಲಾತ್ಮಕ ಪ್ರದರ್ಶನಗಳನ್ನು ಸವಿಯಲು ಅವಕಾಶ ಕಲ್ಪಿಸುತ್ತಿದೆ ಎಂದು ಶಾಸಕ ಎನ್ ಎ ನೆಲ್ಲಿಕುನ್ನು ಅಭಿಪ್ರಾಯಪಟ್ಟರು.
ಬೇಕಲ್ ಅಂತರಾಷ್ಟ್ರೀಯ ಬೀಚ್ ಉತ್ಸವದ ಅಂಗವಾಗಿ ನಿನ್ನೆ ರಾತ್ರಿ ನಡೆದ ಸಾಂಸ್ಕøತಿಕ ರಾತ್ರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಬಾರಿ ಗಳಿಸಿದ ಯಶಸ್ಸು ಮತ್ತು ಶಕ್ತಿಯು ಎರಡನೇ ಹಂತದ ಬೇಕಲ್ ಇಂಟನ್ರ್ಯಾಷನಲ್ ಬೀಚ್ ಫೆಸ್ಟ್ ಅನ್ನು ಮತ್ತೆ ನಡೆಸಲು ಸಂಘಟಕರನ್ನು ಪ್ರೇರೇಪಿಸಿತು ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಕೃಷ್ಣನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಪತ್ರಕರ್ತ, ಕರಾವಳಿ ಅಭಿವೃದ್ದಿ ಮಂಡಳಿ ಸದಸ್ಯ ಕಾಸಿಂ ಇರಗೂರ ಮುಖ್ಯ ಭಾಷಣ ಮಾಡಿದರು. ಅವರು ಮಾತನಾಡಿ, ಆಹಾರದ ನಂತರ ಮನುಷ್ಯನಿಗೆ ಬೇಕಾಗಿರುವುದು ಸಂತಸ. ಇಂತಹ ಉತ್ಸವಗಳು ಅದನ್ನು ಸಾಕಾರಗೊಳಿಸುತ್ತದೆ. ಕಾಸರಗೋಡು ಮಾಪಿಳ್ಳಪ್ಪಾಟ್ ಅನ್ನು ಬೆಂಬಲಿಸಿದ ನಾಡು ಎಂದೂ ಹೇಳಿದರು.
ಶಾಸಕ ಅಡ್ವ.ಸಿ.ಎಚ್.ಕುಂಞಂಬು ಮುಖ್ಯ ಅತಿಥಿಗಳನ್ನು ಗೌರವಿಸಿದರು. ಟಿಕೆಟ್ ಮಾನಿಟರಿಂಗ್ ಸಮಿತಿ ಅಧ್ಯಕ್ಷ ಎಂ.ಎ.ಲತೀಫ್ ಸ್ವಾಗತಿಸಿ, ಆಹಾರ ಸಮಿತಿ ಸಂಚಾಲಕ ಟಿ.ಸುಧಾಕರನ್ ವಂದಿಸಿದರು.