ಕುಂಬಳೆ: ವಿಶ್ವರಾಮ ಕ್ಷತ್ರಿಯ ಮಹಾಸಂಘ ಕುಂದಾಪುರ ಇದರ ತ್ರೈಮಾಸಿಕ ಸಭೆ ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷ ನಾಯಕ ಕನ್ನಡ ಭವನ ಸಭಾಂಗಣದಲ್ಲಿ ಜರಗಿತು. ಮಹಾಸಂಘದ ಅಧ್ಯಕ್ಷ ಎಚ್.ಆರ್.ಶಶಿಧರ ನಾಯ್ಕ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಕಾಸರಗೋಡಿನಲ್ಲಿ ಸ್ವಸಮಾಜದ ಸಮಗ್ರ ಅಭಿವೃದ್ಧಿಗಾಗಿ ಕಳೆದ 90 ವರ್ಷಗಳಿಂದ ದುಡಿಯುತ್ತಿರುವ ಸಂಸ್ಥೆ ಇತರ ಪ್ರದೇಶಗಳ ಸ್ವಸಮಾಜದವರಿಗೆ ಮಾದರಿಯಾಗಿದೆ ಹಾಗು ಪ್ರೇರಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಸರಗೋಡಿನ ಸಮಸ್ತ ಸ್ವಸಮಾಜದ ಪರವಾಗಿ ಎಚ್.ಆರ್.ಶಶಿಧರ ನಾಯ್ಕ್ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸಮ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿಶ್ವ ರಾಮ ಕ್ಷತ್ರಿಯ ಮಹಾಸಂಘದ ವತಿಯಿಂದ ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ ಟೀಚರ್ ದಂಪತಿ, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಗೌರವ ಅಧ್ಯಕ್ಷ ನಿರಂಜನ ಕೊರಕ್ಕೋಡು, ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ, ಚಿತ್ತಾರಿ ಉಪಸಂಘದ ಅಧ್ಯಕ್ಷ ಗಣೇಶ್ ಮಲ್ಲಿಗೆಮಾಡು, ಯುವ ಲೇಖಕ ಗಿರೀಶ್ ಪಿ.ಎಂ, ಮಹಿಳಾ ಸಂಘದ ಗೌರವ ಅಧ್ಯಕ್ಷೆ ಆಶಾ ರಾಧಾಕೃಷ್ಣ, ಉಪಾಧ್ಯಕ್ಷೆ ಉಷಾ ನವೀನ್, ಯುವ ಸಂಘದ ಕಾರ್ಯದರ್ಶಿ ತೇಜಶ್ರೀ, ಕೂಡ್ಲು ಉಪಸಂಘದ ಅಧ್ಯಕ್ಷ ಸತೀಶ್ ಕೂಡ್ಲು, ಜಯಪ್ರಕಾಶ್ ಕುಂಬ್ಳೆ ಮೊದಲಾದವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಪಿ.ಎಸ್, ರಶ್ಮಿರಾಜ್, ಕೋಟೆಯಾರ್ ಯಾನೆ ಕೋಟೆಗಾರರ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಮಾಸ್ತರ್, ಎಸ್.ಬಿ.ಎಲ್.ಎಸ್. ಸೇವಾ ಸಮಾಜ ಕಾರ್ಯದರ್ಶಿ ದಿನೇಶ್ ಮಂಗಳೂರು ರಾಮಕ್ಷತ್ರಿಯ ಸಂಘದ ಅಧ್ಯಕ್ಷ ರಾಧಾಕೃಷ್ಣ, ಕುಂಬಳೆ ಆರಿಕ್ಕಾಡಿ ಶ್ರೀ ಮಲ್ಲಿಕಾರ್ಜುನ ಕುಟುಂಬ ಅಧ್ಯಕ್ಷ ಉಮೇಶ್ ರಾವ್ ಕುಂಬ್ಳೆ ಮೊದಲಾದವರು ಉಪಸ್ಥಿತರಿದ್ದರು. ವಾಮನ್ ರಾವ್ ಬೇಕಲ್ ಸ್ವಾಗತಿಸಿ, ರೇಖಾ ಸುದೇಶ್ ರಾವ್ ಕಾರ್ಯಕ್ರಮ ನಿರೂಪಿಸಿದರು.