ಚೆನ್ನೈ: ಚಂಡಮಾರುತದ ಪರಿಣಾಮ ಮುಂದಿನ ಮೂರು ದಿನಗಳ ಕಾಲ ತಮಿಳುನಾಡಿನಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಆರೆಂಜ್ ಅಲರ್ಟ್ ಘೋಷಿಸಿದೆ.
ಚೆನ್ನೈ: ಚಂಡಮಾರುತದ ಪರಿಣಾಮ ಮುಂದಿನ ಮೂರು ದಿನಗಳ ಕಾಲ ತಮಿಳುನಾಡಿನಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಆರೆಂಜ್ ಅಲರ್ಟ್ ಘೋಷಿಸಿದೆ.
ಮಳೆಯಿಂದ ಆಗಬಹುದಾದ ಹಾನಿಯನ್ನು ನಿಭಾಯಿಸಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಮಿಳುನಾಡಿನ 12 ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಐಎಂಡಿ ಸೂಚಿಸಿದೆ.
ತಿರುವಳ್ಳೂರ್, ಚೆನ್ನೈ, ಕಾಂಚೀಪುರಂ, ರಾಣಿಪೇಟ್, ಚೆಂಗಾಲಪಟ್ಟು, ವಿಲ್ಲುಪುರಂ, ಕಡಾಲೋರ್ ಹಾಗೂ ಮೈಲಾದುದುರೈ ಜಿಲ್ಲೆಗಳಲ್ಲಿ ಡಿಸೆಂಬರ್ 4ರವರೆಗೆ ವಿಪರೀತ ಮಳೆಯಾಗುವ ಸಾಧ್ಯತೆ ಇದೆ. ವೆಲ್ಲೋರ್, ತಿರುವಣ್ಣಾಮಲೈ, ಕಲ್ಲಕುರಿಚಿ, ಪೆರಂಬಲೂರ್, ಅರಿಯಾಲೂರ್, ತಿರುವರೂರ್ ಹಾಗೂ ನಾಗಪಟ್ಟಣಂ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ.
ದಕ್ಷಿಣ ಆಂಧ್ರಪ್ರದೇಶ ಮತ್ತು ಉತ್ತರ ತಮಿಳುನಾಡಿಗೆ ಡಿಸೆಂಬರ್ 4ರಂದು ಚಂಡಮಾರುತ ಅಪ್ಪಳಿಸಲಿದೆ. ನಂತರ ಅದು ಉತ್ತರಾಭಿಮುಖವಾಗಿ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯೆಡೆಗೆ ಚಲಿಸಲಿದೆ. ನಂತರ ಡಿಸೆಂಬರ್ 5ರಂದು ನೆಲ್ಲೂರು ಮತ್ತು ಮಚಲಿಪಟ್ಟಣಂ ಮೂಲಕ ದಕ್ಷಿಣ ಆಂಧ್ರಪ್ರದೇಶವನ್ನು ದಾಟಲಿದೆ. ಈ ವೇಳೆ ಗಾಳಿ ವೇಗ 80-90 ಕಿ.ಮೀ ಇರಲಿದೆ ಎಂದು ಅದು ಹೇಳಿದೆ.