ಮುಳ್ಳೇರಿಯ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರ ಮತ್ತು ಶ್ರೀ ರಾಮ ಪ್ರತಿಷ್ಠಾ ಮಹೋತ್ಸವದ ಅಕ್ಷತೆಯನ್ನು ಭಾನುವಾರ ಬೆಳಗ್ಗೆ ಅಡೂರು ಮಹಾದ್ವಾರ ಕಟ್ಟೆಯಿಂದ ಶ್ರೀ ರಾಮ ನಾಮಜಪದ ಮೆರವಣಿಗೆ ಮೂಲಕ ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತರಲಾಯಿತು. ನೂರಾರು ಸಂಖ್ಯೆಯಲ್ಲಿ ಭಕ್ತಜನರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಶೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಲಂಪಾಡಿ ಪಂಚಾಯತಿ ಸಮಿತಿಯ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ರಾಧಾಕೃಷ್ಣ ಮೇರ್ಟ, ಲಕ್ಷ್ಮಣ ಪೊನಾರಂ, ರಮೇಶ ನೇತೃತ್ವ ವಹಿಸಿದ್ದರು.