ಕಾಸರಗೋಡು: ಮೂನಾಮ್ ಕಡವು ಕಿರು ಅಣೆಕಟ್ಟು ನಿರ್ಮಾಣಕ್ಕಿರುವ ಇನ್ವೆಸ್ಟಿಗೇಷನ್ ಕಾರ್ಯಕ್ಕೆ ರಾಜ್ಯ ಯೋಜನಾ ಮಂಡಳಿ ಅನುಮತಿ ನೀಡಿದೆ. ಜಿಲ್ಲೆಯಲ್ಲಿ ಬರ ಹಾಗೂ ಅಂತರ್ಜಲದ ಕೊರತೆಯಿರುವ ಹಿನ್ನೆಲೆಯಲ್ಲಿ ಚಂದ್ರಗಿರಿ ನದಿಯ ಪುಲ್ಲೂರ್‍ಪೆರಿಯ ಗ್ರಾಮ ಪಂಚಾಯಿತಿಯ ಮೂನಾಮ್ ಕಡವಿನಲ್ಲಿ ನೀರು ಸಂಗ್ರಹಕ್ಕಾಗಿ ಮಿನಿಡ್ಯಾಮಿಗಿರುವ ಇನ್ವೆಸ್ಟಿಗೇಷನ್ ನಡೆಸುವುದು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಅಳವಡಿಸಿ ಯೋಜನೆ ಜಾರಿಯಾಗಲಿದೆ.
ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಸಲ್ಲಿಸಿದ ಪ್ರಪೆÇೀಸಲ್ ಅಂಗೀಕರಿಸಿ ಈ ಅನುಮತಿ ನೀಡಲಾಗಿದೆ. ಇನ್ವೆಸ್ಟಿಗೇಷನ್ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಜಿಲ್ಲಾ ಮಟ್ಟದ ಸಮಿತಿಯು ಶೀಘ್ರದಲ್ಲೇ ಆಡಳಿತಾತ್ಮಕ ಅನುಮತಿ ನೀಡಲಿದೆ ಎಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ತಿಳಿಸಿದರು. ಒಂದು ತಿಂಗಳೊಳಗೆ ಇನ್ವೆಸ್ಟಿಗೇಷನ್ ಕಾರ್ಯ ಆರಂಭವಾಗಲಿದೆ. 2023-24ರ ಬಜೆಟ್‍ನಲ್ಲಿ ಇನ್ವೆಸ್ಟಿಗೇಷನ್ ಕಾರ್ಯಕ್ಕಾಗಿ 75 ಲಕ್ಷ ರೂಪಾಯಿ ಮಂಜೂರು ಮಾಡಲಾಗಿದೆ.