ಕಾಸರಗೋಡು: ಇಂದಿನ ಮಾಧ್ಯಮದ ಶೈಲಿಯಲ್ಲಿ ಮಹತ್ವದ ಬದಲಾವಣೆಯುಂಟಾಗಿದ್ದು, ಸೈಬರ್ ವಾರಿಯರ್‍ಗಳ ಕೈವಾಡದಿಂದ ಮಾಧ್ಯಮ ಕ್ಷೇತ್ರ ಹದಗೆಡುತ್ತಿರುವುದಾಗಿ ಕಥೆಗಾರ ಟಿ ಪದ್ಮನಾಭನ್ ತಿಳಿಸಿದ್ದಾರೆ.
ಅವರು ಕಾಸರಗೋಡು ಪ್ರೆಸ್ ಕ್ಲಬ್ ವತಿಯಿಂದ ಕೊಡಮಾಡುವ ಕೆ.ಎಂ.ಅಹ್ಮದ್ ಸ್ಮಾರಕ ಪ್ರಶಸ್ತಿ ಪ್ರದಾನ ಹಾಗೂ ಕೆ.ಎಂ.ಅಹ್ಮದ್ ಸಂಸ್ಮರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆ.ಎಂ.ಅಹ್ಮದ್ ಸ್ಮಾರಕ ಮಾಧ್ಯಮ ಪ್ರಶಸ್ತಿ ಮನೋರಮಾ ನ್ಯೂಸ್ ಹಿರಿಯ ಕ್ಯಾಮರಾಮನ್ ಎ ನಂದಕುಮಾರ್ ಅವರಿಗೆ ಟಿ. ಪದ್ಮನಾಭನ್ ಪ್ರದಾನ ಮಾಡಿದರು. ಪ್ರೆಸ್‍ಕ್ಲಬ್ ಉಪಾಧ್ಯಕ್ಷ ನಹಾಸ್ ಪಿ ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಪ್ರದೀಪ್ ನಾರಾಯಣನ್ ಪ್ರಶಸ್ತಿಪುರಸ್ಕøತರ ಪರಿಚಯ ನೀಡಿದರು. ಮುಜೀಬ್ ಅಹ್ಮದ್, ವಿ.ವಿ.ಪ್ರಭಾಕರನ್, ಸಿ.ಎಲ್.ಹಮೀದ್, ನಾಸರ್ ಚೆರ್ಕಳಂ, ಟಿ.ಎ.ಶಾಫಿ ಉಪಸ್ಥಿತರಿದ್ದರು. ಪ್ರಶಸ್ತಿ ಪುರಸ್ಕøತ ಎ.ನಂದಕುಮಾರ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.. ಕಾರ್ಯದರ್ಶಿ ಕೆ.ವಿ.ಪದ್ಮೇಶ್ ಸ್ವಾಗತಿಸಿದರು. ಅಬ್ದುಲ್ಲಾ ಕುಞÂ ಉದುಮ ವಂದಿಸಿದರು.