ಕೊಲ್ಲಂ: ಓಯೂರಿನಲ್ಲಿ ಆರು ವರ್ಷದ ಬಾಲಕಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಚಾತನ್ನೂರು ಮೂಲದ ಪದ್ಮಕುಮಾರ್ ಎಂಬಾತನನ್ನು ಬಾಲಕಿ ಗುರುತಿಸಿದ್ದಾಳೆ.
ಪದ್ಮಕುಮಾರ್, ಅವರ ಪತ್ನಿ ಅನಿತಾ ಮತ್ತು ಪುತ್ರಿ ಅನುಪಮಾ ಅವರನ್ನು ಚಾತನೂರು ಕವಿತಾಲಯದಲ್ಲಿ ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಅವರು ಬಳಸುತ್ತಿದ್ದ ಕಾರನ್ನು ಸಹ ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಎರಡು ಕಾರು, ಆಟೋರಿಕ್ಷಾ ಸೇರಿದಂತೆ ಮೂರು ವಾಹನಗಳು ಸದ್ಯ ಪೆÇಲೀಸರ ವಶದಲ್ಲಿವೆ.
ಪದ್ಮಕುಮಾರ್ ಮತ್ತು ಆತನ ಕುಟುಂಬವನ್ನು ತಮಿಳುನಾಡಿನ ತೆಂಕಾಶಿಯಲ್ಲಿ ಇಂದು ಮಧ್ಯಾಹ್ನ ಬಂಧಿಸಲಾಗಿದೆ. ಅವರನ್ನು ಆತೂರಿನ ಎಆರ್ ಕ್ಯಾಂಪ್‍ಗೆ ಕರೆದೊಯ್ಯಲಾಗಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕುಟುಂಬಸ್ಥರನ್ನು ವಿಚಾರಣೆ ನಡೆಸುತ್ತಿದ್ದಾರೆ. ಪದ್ಮಕುಮಾರ್ ಮತ್ತು ಅವರ ಕುಟುಂಬವನ್ನು ಕೊಲ್ಲಂ ಎಸ್ಪಿ ನೇತೃತ್ವದ ವಿಶೇಷ ದಳವು ಪತ್ತೆಮಾಡಿ ಬಂಧಿಸಿದೆ. .
ಮಗುವಿನ ತಂದೆಯೊಂದಿಗೆ ದ್ವೇಷ; ಮಗಳ ದಾಖಲಾತಿಗೆ 5 ಲಕ್ಷ ರೂ. ಪಡೆದರು; ಹೆದರಿಸುವುದೊಂದೇ ಗುರಿಯಾಗಿತ್ತು; ಪದ್ಮಕುಮಾರ್ ಹೇಳಿಕೆ
ಬಾಲಕಿ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಪದ್ಮಕುಮಾರ್ ಹೇಳಿಕೆ ಹೊರಬಿದ್ದಿದೆ. ಮಗುವಿನ ತಂದೆಯೊಂದಿಗಿನ ದ್ವೇಷವೇ ಅಪಹರಣದ ಕಾರಣ ಎಂದು ಪದ್ಮಕುಮಾರ್ ಹೇಳಿಕೆ ನೀಡಿದ್ದಾರೆ.
ಬಾಲಕಿಯ ತಂದೆ ತನ್ನ ಮಗಳಿಗೆ ನರ್ಸಿಂಗ್ ಅಡ್ಮಿಷನ್ ಕೊಡಿಸುವುದಾಗಿ ಹೇಳಿ 5 ಲಕ್ಷ ರೂ.ನೀಡಿ ಮೋಸ ಮಾಡಿದ್ದು, ಇದೇ ದ್ವೇಷ ಭಾವನೆಗೆ ಕಾರಣ ಎಂದು ಪದ್ಮಕುಮಾರ್ ಪೆÇಲೀಸರಿಗೆ ತಿಳಿಸಿದ್ದಾರೆ.
ಆದರೆ ಪೆÇಲೀಸರು ಹೇಳಿಕೆಯನ್ನು ನಂಬಿಲ್ಲ. ಸದ್ಯ ಪದ್ಮಕುಮಾರ್, ಅವರ ಪತ್ನಿ ಹಾಗೂ ಮಗಳು ಅಡೂರು ಎಆರ್ ಕ್ಯಾಂಪ್ ನಲ್ಲಿದ್ದಾರೆ. ಆರು ವರ್ಷದ ಬಾಲಕಿ ಪದ್ಮಕುಮಾರ್ ನನ್ನು ಗುರುತಿಸಿದ್ದಾಳೆ.