ಕರುನಾಗಪ್ಪಳ್ಳಿ: ಆರ್ಥಿಕವಾಗಿ ಸುಭದ್ರವಾಗಿರುವ ಡಾ. ರುವೈಸ್ ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇರಿಸಿದ್ದು ಡಾ. ಶಹನಾ ಅವರನ್ನು ವಿವಾಹದಿಂದ ಹಿಂದೆ ಸರಿಯಲು ಎಂದು ಸ್ಥಳೀಯರು ತಿಳಿಸಿದ್ದಾರೆ.
ಕರುನಾಗಪ್ಪಳ್ಳಿಯಲಲಿ ಎಸ್ ವಿ ಮಾರ್ಕೆಟ್ ಬಳಿ ಮಧ್ಯಮ ವರ್ಗದ ಮನೆಯಲ್ಲಿ ವಾಸವಾಗಿರುವ ಅಬ್ದುಲ್ ರಶೀದ್ ಮತ್ತು ಆರಿಫಾ ದಂಪತಿಯ ಇಬ್ಬರು ಮಕ್ಕಳಲ್ಲಿ ರುವೈಸ್ ಹಿರಿಯವರಾಗಿದ್ದಾರೆ. ಅವರ ಸಹೋದರಿ ಕೂಡ ಎಂಬಿಬಿಎಸ್ ವಿದ್ಯಾರ್ಥಿನಿ.
ತಂದೆ ಅಬ್ದುಲ್ ರಶೀದ್ ಎಡಪಂಥೀಯ ಕಾರ್ಯಕರ್ತ. ಹಲವು ವರ್ಷಗಳ ಕಾಲ ವಿದೇಶದಲ್ಲಿ ಕೆಲಸ ಮಾಡಿ ಮರಳಿದ ಅಬ್ದುಲ್ ರಶೀದ್ ಪ್ರಸ್ತುತ ಸರ್ಕಾರಿ ಗುತ್ತಿಗೆದಾರರಾಗಿದ್ದಾರೆ. ಎಡಪಂಥೀಯ ನಾಯಕರ ಜತೆಗೂ ಅವಿನಾಭಾವ ಸಂಬಂಧ ಹೊಂದಿದ್ದಾರೆ ಎನ್ನುತ್ತಾರೆ ಸ್ಥಳೀಯರು. ರುವೈಸ್ ಅವರ ಕುಟುಂಬ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ. ಕರುನಾಗಪಳ್ಳಿಯ ವಿವಿಧ ಸ್ಥಳಗಳಲ್ಲಿ ಮನೆಗಳು ಮತ್ತು ಕಟ್ಟಡಗಳು ಬಾಡಿಗೆಗೆ ನೀಡುತ್ತಿದ್ದಾರೆ. ಮಾಸಿಕ ಬಾಡಿಗೆ ಸುಮಾರು ಲಕ್ಷ ರೂ.ಗಿಂತ ಮಿಕ್ಕಿದೆ.
ಅಲಪ್ಪುಳ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪಾಸಾದ ನಂತರ ಪಿಜಿಗಾಗಿ ತಿರುವನಂತಪುರಂ ಮೆಡಿಕಲ್ ಕಾಲೇಜಿಗೆ ಬಂದ ಡಾ. ಶಹನಾಗೆ ನಿಕಟವಾಗಿದ್ದ ರುವೈಸ್ ಶಹನಾಳ ಆರ್ಥಿಕ ಪರಿಸ್ಥಿತಿ ತಿಳಿದಿತ್ತು. ವಿವಾಹದಿಂದ ಸಂಪೂರ್ಣ ತಪ್ಪಿಸುವ ಉದ್ದೇಶದಿಂದ ಹೆಚ್ಚಿನ ಹಣ ಕೇಳಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ಶಹನಾ ಅವರ ಕುಟುಂಬವು ಕೇಳಿರುವ ಹಣವನ್ನು ಯಾವುದೇ ರೀತಿಯಲ್ಲಿ ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ರುವೈಸ್ ಮತ್ತು ಅವರ ಕುಟುಂಬಕ್ಕೆ ತಿಳಿದಿತ್ತು. ಇದಕ್ಕೆ ಕುಟುಂಬದವರು ಸಂಪೂರ್ಣ ಬೆಂಬಲ ನೀಡಿದರು. ಎಡಪಕ್ಷಗಳ ಕೇರಳ ಮೆಡಿಕಲ್ ಪಿಜಿ ಅಸೋಸಿಯೇಶನ್‍ನ ರಾಜ್ಯಾಧ್ಯಕ್ಷರೂ ಆಗಿರುವ ರುವೈಸ್ ಅವರು ರಾಜಕೀಯ ಪ್ರಭಾವ ಬಳಸಿ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆದರೆ, ಡಾ. ಶಹನಾ ತನ್ನ ಪ್ರಾಣವನ್ನೇ ತೆಗೆದುಕೊಂಡಳು. ರುವೈಸ್ ಬಂಧನದ ನಂತರ, ಅವರ ತಂದೆ ಅಬ್ದುಲ್ ರಶೀದ್ ಕೂಡ ಪ್ರಕರಣದಲ್ಲಿ ಒಳಪಡಿಸಲಾಗಿದೆ.
ಪೋಲೀಸರು ಮನೆಗೆ ತಲುಪಿದರೂ ಅಬ್ದುಲ್ ರಶೀದ್‍ನನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಆತ ತಲೆಮರೆಸಿಕೊಂಡಿದ್ದಾನೆ. ಘಟನೆಯ ಬಳಿಕ ಮನೆ ಮುಚ್ಚಿದೆ.