ಮಾನಂತವಾಡಿ: ನಮ್ಮ ದೇಶದ ನೈಜ ಇತಿಹಾಸವನ್ನು ಹೊಸ ತಲೆಮಾರಿಗೆ ಹಸ್ತಾಂತರಿಸಲು ರಾಷ್ಟ್ರೀಯ ಪ್ರಜ್ಞೆಯುಳ್ಳ ಪೀಳಿಗೆಯನ್ನು ತಯಾರು ಮಾಡಬೇಕು ಎಂದು ಆರ್ ಎಸ್ ಎಸ್ ಹಿರಿಯ ಪ್ರಚಾರಕ ಎಸ್. ಸೇತುಮಾಧವನ್ ಹೇಳಿದ್ದಾರೆ. ಪಳಶ್ಚಿ ವೀರಾಹುತಿ ದಿನದಂಗವಾಗಿ ಮಾನಂತವಾಡಿಯ ಸ್ಮೃತಿ ಮಂಟಪದಲ್ಲಿ ಪುμÁ್ಪರ್ಚನೆ ಮಾಡಿ ಅವರು ಮಾತನಾಡಿದರು.
ಅನೇಕ ಯುವಕರು ಸ್ವಾತಂತ್ರ್ಯದ ಬೆಲೆಯನ್ನು ತಿಳಿಯದೆ ಆರಾಮವಾಗಿ ಮುನ್ನಡೆಯಲು ಬಯಸುತ್ತಾರೆ. ಒಂದು ಹನಿ ರಕ್ತವೂ ಸುರಿಸದೆ ಈ ದೇಶ ಸ್ವತಂತ್ರವಾಯಿತು ಎನ್ನುವುದನ್ನು ಇತಿಹಾಸ ಕಲಿಸಿದೆ. ಇದನ್ನು ಕಲಿಯುತ್ತಿರುವ ಹೊಸ ತಲೆಮಾರು ಸ್ವಾತಂತ್ರ್ಯವನ್ನು ಉಳಿಸಿ ಭಾರತದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಮಾಡುವ ಜವಾಬ್ದಾರಿಯಿಲ್ಲದೆ ಬೆಳೆಯುತ್ತಿರುವುದು ಆತಂಕಕಾರಿ ಎಂದು ಅವರು ಹೇಳಿದರು.
ಭಾರತದ ಮೊದಲ ಸ್ವಾತಂತ್ರ್ಯ ಹೋರಾಟ 1857ರಲ್ಲಿ ನಡೆದಿತ್ತು ಎಂದು ಹೇಳಲಾಗುತ್ತದೆ. ಇದು ಬ್ರಿಟಿಷರ ವಿರುದ್ಧದ ಮೊದಲ ಸಂಘಟಿತ ಹೋರಾಟ. ಅದಕ್ಕೂ ಮುನ್ನ 50 ವರ್ಷಗಳ ಹಿಂದೆ ಕೇರಳದಲ್ಲಿ ಪಳಶ್ಚಿ ರಾಜ ಎಷ್ಟು ಕೆಚ್ಚೆದೆಯ ಹೋರಾಟ ನಡೆಸಿದ್ದ ಎಂಬುದು ಗೊತ್ತಾಗಬೇಕು. ಎಲ್ಲ ಜನರನ್ನು ಅದರಲ್ಲೂ ಬುಡಕಟ್ಟು ಜನರನ್ನು ಸಂಘಟಿಸಿ 12 ವರ್ಷಗಳ ಕಾಲ ಬ್ರಿಟಿಷರ ವಿರುದ್ಧ ಸಮರ ಸಾರಿದ್ದು ಪಳಶ್ಚಿ ರಾಜಾ ಅವರ ಹಿರಿಮೆಯನ್ನು ಎದ್ದು ಕಾಣಿಸುತ್ತದೆ.
ಆದರೆ ಈ ಇತಿಹಾಸ ಕೆಲಕಾಲ ಮರೆತು ಹೋಗಿತ್ತು. ಪೂರ್ವಜರ ಸ್ಮರಣೆಯನ್ನು ನವೀಕರಿಸಲು, ಕಲಿಯಲು ಮತ್ತು ಹೊಸ ಪೀಳಿಗೆಗೆ ರವಾನಿಸಲು ರಾಷ್ಟ್ರ ಪ್ರಜ್ಞೆಯುಳ್ಳ ಸಮಾಜ ಇಂದು ಮುಂದೆ ಬಂದಿದೆ. 1980ರಲ್ಲಿ ಪಳಶ್ಚಿ ಗುಡಿಸಲಿನಿಂದ ಬೆಳಗಿದ ದೀಪ ಕೇರಳದಾದ್ಯಂತ ಸಂಚರಿಸಿ ಆ ಹೋರಾಟದ ನೆನಪುಗಳನ್ನು ಮೆಲುಕು ಹಾಕಿತು. ಈ ಪ್ರೇರಣೆಯನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಸಮಾಜವನ್ನು ಜಾಗೃತಗೊಳಿಸುವಂತಾಗಬೇಕು ಎಂದರು.
ಮಾನಂತವಾಡಿ ಚುಟ್ಟಕ್ಕಡವ್ ವೀರಪಳಶ್ಚಿ ನಗರದಲ್ಲಿ ನಡೆದ ಪಳಸ್ಸಿ ಸ್ಮೃತಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ನಟ ದೇವನ್, ಐತಿಹಾಸಿಕ ಸತ್ಯಗಳನ್ನು ತಿರುಚಿ ತಲೆಮಾರುಗಳಿಗೆ ಕಲಿಸಲಾಗುತ್ತಿದೆ. ಪಳಶ್ಚಿ ರಾಜ ವಿಶ್ವದ ಪ್ರಮುಖ ಯುದ್ಧಗಳಲ್ಲಿ ಒಂದನ್ನು ಮುನ್ನಡೆಸಿದರು. ನಮ್ಮ ದೇಶದ ಇತಿಹಾಸಕಾರರು ಪಳಶ್ಚಿಯ ಶೌರ್ಯವನ್ನು, ಅವರ ವಿರೋಧಿಗಳು ಹೊಗಳಿದರೂ ನಿರ್ಲಕ್ಷಿಸಿದ್ದಾರೆ ಎಂದು ಅವರು ಹೇಳಿದರು.
ಸಭೆಯಲ್ಲಿ ಎಸ್. ಸೇತುಮಾಧವನ್ ಮುಖ್ಯ ಭಾಷಣ ಮಾಡಿದರು. ಮಹಿಳಾ ಆಯೋಗದ ಸದಸ್ಯೆ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷೆ ರುಗ್ಮಿಣಿ ಭಾಸ್ಕರನ್ ಅಧ್ಯಕ್ಷತೆ ವಹಿಸಿದ್ದರು. ಲೇಖಕ ವಿ.ಕೆ. ರಾಜಾ ಸ್ಮರಣಾರ್ಥ ಸಂತೋμï ಕುಮಾರ್ ಪಳಶ್ಚಿ ಮಾತನಾಡಿದರು. ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಎಂ. ಸುರೇಂದ್ರನ್ ಸ್ವಾಗತಿಸಿ, ಹಣಕಾಸು ಸಮಿತಿ ಅಧ್ಯಕ್ಷ ಪುನತ್ತಿಲ್ ರಾಜನ್ ವಂದಿಸಿದರು.