ಚುರಚಂದಾಪುರ: ಮಣಿಪುರದ ಮೋರೆ ಸಮೀಪ ಶನಿವಾರ ವೇಳೆ ಅಪರಿಚಿತ ಬಂದೂಕುಧಾರಿಗಳು ಮತ್ತು ಪೊಲೀಸ್ ಕಮಾಂಡೊಗಳ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದೆ.
ಮಣಿಪುರದಲ್ಲಿ ಗುಂಡಿನ ಚಕಮಕಿ: ಎರಡು ಮನೆಗಳಿಗೆ ಬೆಂಕಿ, ಪರಿಸ್ಥಿತಿ ಉದ್ವಿಗ್ನ
0
ಡಿಸೆಂಬರ್ 31, 2023
Tags
ಚುರಚಂದಾಪುರ: ಮಣಿಪುರದ ಮೋರೆ ಸಮೀಪ ಶನಿವಾರ ವೇಳೆ ಅಪರಿಚಿತ ಬಂದೂಕುಧಾರಿಗಳು ಮತ್ತು ಪೊಲೀಸ್ ಕಮಾಂಡೊಗಳ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದೆ.
ಮೋರೆ ಸನಿಹದಲ್ಲಿರುವ ಪ್ರಮುಖ ಸ್ಥಳಕ್ಕೆ ಕಮಾಂಡೊಗಳನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ಯುವಾಗ ಬಂದೂಕುಧಾರಿಗಳು, ವಾಹನಗಳ ಮೇಲೆ ಗುಂಡಿನ ಸುರಿಮಳೆಗರೆದಿದ್ದಾರೆ.
'ಎಂ ಚಹ್ನೌ ಗ್ರಾಮ ವ್ಯಾಪ್ತಿಯಲ್ಲಿನ ಇಂಫಾಲ್-ಮೋರೆ ರಸ್ತೆಯಲ್ಲಿ ವಾಹನಗಳು ಚಲಿಸುತ್ತಿದ್ದಾಗ ಅಪರಿಚಿತ ಬಂದೂಕುಧಾರಿಗಳು ನಡೆಸಿದ ದಾಳಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದು, ಅಸ್ಸಾಂ ರೈಫಲ್ಸ್‌ನ ಶಿಬಿರದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಸ ಮೋರೆಯ ಪ್ರವೇಶ ದ್ವಾರದ ಸಮೀಪ ಮತ್ತು ಎಂ ಚಹ್ನೌ ಗ್ರಾಮದಲ್ಲಿ ಗುಂಡಿನ ಚಕಮಕಿ ನಡೆದಿದೆ. ಮೋರೆ ಪಟ್ಟಣದಲ್ಲಿ ಎರಡು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಮೂಲಗಳು ತಿಳಿಸಿವೆ.