ಕಾಸರಗೋಡು: ಜಿಲ್ಲೆಯ ಮತದಾರರ ಪಟ್ಟಿ ಪರಿವೀಕ್ಷಕ ಪ್ರೇಮಕೃಷ್ಣನ್ ಅವರು ಜಿಲ್ಲೆಯ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು ಚುನಾವಣಾ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಗಳ ಅವಲೋಕನ ನಡೆಸಿದರು.
ಸಭೆಯಲ್ಲಿಶಾಸಕರಾದ ಎನ್.ಎ.ನೆಲ್ಲಿಕುನ್, ಎಂ. ರಾಜಗೋಪಾಲನ್, ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ.ಕೈನಿಕರ, ಎಡಿಎಂ ಕೆ.ನವೀನ್ ಬಾಬು, ಕಾಸರಗೋಡು ಆರ್.ಡಿ.ಒ ಅತುಲ್ ಸ್ವಾಮಿನಾಥ್, ಚುನಾವಣಾ ಜಿಲ್ಲಾಧಿಕಾರಿ ಅಜೇಶ್. ಕೆ, ಸಹಾಯಕ ಜಿಲ್ಲಾಧಿಕಾರಿ ಸಿರೋಶ್ ಪಿ ಜಾನ್, ಚುನಾವಣಾ ನೋಂದಣಿ ಅಧಿಕಾರಿಗಳಾದ ಕೆ ಜಿ ಮೋಹನರಾಜ್ (ಮಂಜೇಶ್ವರ), ಉನ್ನಿಕೃಷ್ಣ ಪಿಳ್ಳೈಎಸ್.(ಕಾಸರಗೋಡು), ಮಾಯಾ. ಎಂ (ಹೊಸದುರ್ಗ) ಹಾಗೂ ಇತರೆ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರ ಪ್ರತಿನಿಧಿ ಎಂ.ಸಿ.ಪ್ರಭಾಕರನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ.ಕುಞಂಬು ನಂಬಿಯಾರ್, ಬಿಜು ಉಣ್ಣಿತ್ತಾನ್, ಎ. ರವೀಂದ್ರನ್, ಕೆ ವಿಜಯಕುಮಾರ್, ಎಂವಿ. ಶಿಲ್ಪರಾಜ್ ಉಪಸ್ಥಿತರಿದ್ದರು. ಮತದಾರರ ಪಟ್ಟಿಯ ದೋಷರಹಿತ ತಯಾರಿಗಾಗಿ ಎಲ್ಲಾರಾಜಕೀಯ ಪ್ರತಿನಿಧಿಗಳ ಸಹಕಾರವನ್ನೂ ಕೋರಲಾಯಿತು. ಚರ್ಚೆಯಲ್ಲಿ ಪ್ರಸ್ತಾಪಿಸಲಾದ ಸಮಸ್ಯೆಗಳನ್ನು ಮುಖ್ಯ ಚುನಾವಣಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ವೀಕ್ಷಕರು ಭರವಸೆ ನೀಡಿದರು. ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ದೋಷರಹಿತವಾಗಿ ನಡೆಯುತ್ತಿದೆ ಎಂದು ಮತದಾರರ ಪಟ್ಟಿ ವೀಕ್ಷಕರು ಮೌಲ್ಯಮಾಪನ ಮಾಡಿದರು.