ಕಾಸರಗೋಡು: ಹಸಿರು ಕೇರಳ ಮಿಷನ್ ಕಾಸರಗೋಡು ಜಿಲ್ಲಾ ಪಂಚಾಯಿತಿ ಮೂಲಕ ಹೈಯರ್ ಸೆಕೆಂಡರಿ ಶಾಲೆಗಳಲ್ಲಿನ ನೀರಿನ ಗುಣಮಟ್ಟ ಪರೀಕ್ಷಾ ಲಾಬ್ ನಿಯಂತ್ರಿತ ರಸಾಯನ ಶಾಸ್ತ್ರ ಶಿಕ್ಷಕರ ತರಬೇತಿ ಡಿಸೆಂಬರ್ 1 ರಂದು ಬೆಳಿಗ್ಗೆ 10ಕ್ಕೆ ಉದುಮ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ.
ರಾಜ್ಯದ ತರಬೇತುದಾರರಾದ ಕ್ಯಾರೋಲಿನ್ ಜೋಸೆಫ್ ಮತ್ತು ಗ್ರೀಷ್ಮಾ ತರಬೇತಿ ನೇತೃತ್ವ ವಹಿಸುವರು. ಸಾರ್ವಜನಿಕ ಶಿಬಿರಕ್ಕಾಗಿ ನೀರಿನ ಪರೀಕ್ಷೆ ನಡೆಸುವುದಕ್ಕೆ ಪೂರ್ವತಯಾರಿಗಾಗಿ ತರಬೇತಿಯನ್ನು ಆಯೋಜಿಸಲಾಗಿದೆ
ನಾಳೆ ಡಿ.ಪಿ.ಸಿ ಹಾಲ್‍ನಲ್ಲಿ ಜಲ ಬಜೆಟ್:
ಜಿಲ್ಲೆಯಲ್ಲಿ ನೀರಿನ ಲಭ್ಯತೆ ಕಂಡುಹಿಡಿದು, ನೀರಿನ ಬಳಕೆಯನ್ನು ಮೌಲ್ಯಮಾಪನ ಮಾಡಿ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಜಲ ಬಜೆಟ್ ಸಿದ್ಧಪಡಿಸಲಾಗಿದೆ. ನಂತರ ಸಂಶೋಧನೆಗಳ ಆಧಾರದ ಮೇಲೆ ವಿವರವಾದ ವರದಿ ಮತ್ತು ಜಲ ಭದ್ರತಾ ಯೋಜನೆಯನ್ನು ಸಿದ್ಧಪಡಿಸಬೇಕಾಗಿದೆ. ಕಾಸರಗೋಡು ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ನೋಡಲ್ ಅಧಿಕಾರಿ ಸೇರಿದಂತೆ ತಲಾ ಮೂವರಿಗೆ ತರಬೇತಿ ನೀಡಲಾಗುತ್ತದೆ. ಡಿಸೆಂಬರ್ 31ರೊಳಗೆ ಜಲ ಬಜೆಟ್ ಬಿಡುಗಡೆ ಮಾಡಲಿರುವ ತರಬೇತಿಯನ್ನು ಡಿಸೆಂಬರ್ 2ರಂದು ಬೆಳಗ್ಗೆ 10ಇಂದ ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ತಾಂತ್ರಿಕ ಸಮಿತಿ ಸದಸ್ಯರು ತರಬೇತಿಯ ನೇತೃತ್ವ ವಹಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಉದ್ಘಾಟಿಸುವರು.