ತಿರುವನಂತಪುರ: ದಾಖಲೆಪತ್ರಗಳಲ್ಲಿ 'ಲಿಂಗತ್ವ ಅಲ್ಪಸಂಖ್ಯಾತೆ' ಎಂದೇ ನಮೂದಿಸಿ ಫೈಸಲ್ ಫೈಸು ಎಂಬುವರು ತ್ರಿಶ್ಯೂರ್‌ನ ಚಾವಕ್ಕಾಡ್‌ನಲ್ಲಿ ಜಮೀನು ನೋಂದಣಿ ಮಾಡಿದ್ದಾರೆ.
ತಿರುವನಂತಪುರ: ದಾಖಲೆಪತ್ರಗಳಲ್ಲಿ 'ಲಿಂಗತ್ವ ಅಲ್ಪಸಂಖ್ಯಾತೆ' ಎಂದೇ ನಮೂದಿಸಿ ಫೈಸಲ್ ಫೈಸು ಎಂಬುವರು ತ್ರಿಶ್ಯೂರ್‌ನ ಚಾವಕ್ಕಾಡ್‌ನಲ್ಲಿ ಜಮೀನು ನೋಂದಣಿ ಮಾಡಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತ ಎಂದು ನಮೂದಿಸಿ ಆಸ್ತಿ ನೋಂದಣಿ ಮಾಡಿರುವ ಮೊದಲ ಪ್ರಕರಣ ಇದಾಗಿದೆ ಎಂದು ಮೂಲಗಳು ತಿಳಿಸಿವೆ.
ಫೈಸಲ್ ಫೈಸು ಅವರ ಪರಿಶ್ರಮದಿಂದಾಗಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರು ಜಮೀನು ನೋಂದಣಿ ಮಾಡುವಾಗ ಎದುರಿಸುತ್ತಿದ್ದ ಅಡೆತಡೆಗಳಿಗೆ ಕೊನೆ ಹಾಡಿದಂತಾಗಿದೆ ಎಂದೂ ಮೂಲಗಳು ಹೇಳಿವೆ.
ಇದುವರೆಗೂ ಆನ್‌ಲೈನ್ ಮೂಲಕ ನೋಂದಣಿ ಪ್ರಕ್ರಿಯೆ ನಡೆಸುವಾಗ ಕೇವಲ ಪುರುಷ ಮತ್ತು ಮಹಿಳೆ ಎಂಬ ಆಯ್ಕೆ ಮಾತ್ರ ಇತ್ತು.
ದಾಖಲೆಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತೆ ಎಂದೇ ನಮೂದಿಸಿ ಜಮೀನು ನೋಂದಣಿ ಮಾಡಲು ಬಯಸಿರುವುದಾಗಿ ಫೈಸು ಅವರು ಚಾವಕ್ಕಾಡ್‌ನ ಉಪ ನೋಂದಣಿ ಕಚೇರಿಯ ಅಧಿಕಾರಿಗಳಿಗೆ ತಿಳಿಸಿದ್ದರು. ಮೂರು ವಾರಗಳಲ್ಲಿ ಜಮೀನು ನೋಂದಣಿಗೆ ಅವರು ಅನುಕೂಲ ಮಾಡಿಕೊಟ್ಟಿದ್ದರು ಎಂದು ಮೂಲಗಳು ತಿಳಿಸಿವೆ.
ಆಧಾರ್ ಕಾರ್ಡ್ ಸೇರಿದಂತೆ ಎಲ್ಲಾ ದಾಖಲೆಗಳಲ್ಲೂ ಫೈಸು ಅವರು ತಮ್ಮ ಗುರುತನ್ನು ಲಿಂಗತ್ವ ಅಲ್ಪಸಂಖ್ಯಾತೆ ಎಂದೇ ನಮೂದಿಸಿದ್ದಾರೆ.