ಇಸ್ಲಾಮಾಬಾದ್: 'ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ಆಶ್ರಯ ಪಡೆದ ಕೆಲವು ರಾಜಕೀಯ ಭಿನ್ನಮತೀಯರು ದೇಶದಲ್ಲಿರುವ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ' ಎಂದು ಪಾಕಿಸ್ತಾನ ಒಪ್ಪಿಕೊಂಡಿದೆ.
ಇಸ್ಲಾಮಾಬಾದ್: 'ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ಆಶ್ರಯ ಪಡೆದ ಕೆಲವು ರಾಜಕೀಯ ಭಿನ್ನಮತೀಯರು ದೇಶದಲ್ಲಿರುವ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ' ಎಂದು ಪಾಕಿಸ್ತಾನ ಒಪ್ಪಿಕೊಂಡಿದೆ.
ಪ್ರಸ್ತುತ ಬ್ರಿಟನ್‌ನಲ್ಲಿ ನೆಲೆಸಿರುವ ಮಿರ್ಜಾ ಶಾಹ್‌ಜಾದ್ ಅವರ ಮೇಲೆ ಆಯಸಿಡ್ ದಾಳಿ ಸಂಭವಿಸಿದ ಕುರಿತು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ಕಚೇರಿಯ ವಕ್ತಾರೆ ಮುಮ್ತಾಜ್ ಜಹ್ರಾ ಬಲೋಚ್ ಅವರನ್ನು ಪ್ರಶ್ನಿಸಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು.
'ಆಯಸಿಡ್ ದಾಳಿಯಲ್ಲಿ ಪಾಕಿಸ್ತಾನ ಅಥವಾ ಪಾಕಿಸ್ತಾನಿ ಸಂಸ್ಥೆಗಳ ಯಾವುದೇ ಕೈವಾಡವಿಲ್ಲ. ವಿದೇಶದಲ್ಲಿ ನೆಲೆಸಿರುವ ನಮ್ಮ ದೇಶದ ಪ್ರಜೆಗಳನ್ನು ಗುರಿಯಾಗಿಸುವುದು ನಮ್ಮ ನೀತಿಯಲ್ಲ. ಅಂತಹ ವ್ಯಕ್ತಿಗಳ ವಿರುದ್ಧ ಪಾಕಿಸ್ತಾನ ಯಾವುದೇ ಬಾಹ್ಯ ದಾಳಿಯಲ್ಲಿ ತೊಡಗಿಲ್ಲ. ವಿದೇಶಗಳಲ್ಲಿ ಆಶ್ರಯ ಪಡೆದಿರುವ ಅನೇಕ ರಾಜಕೀಯ ಭಿನ್ನಮತೀಯರು ಹಲವು ದಶಕಗಳಿಂದ ದೇಶದ ಉಗ್ರರೊಂದಿಗೆ ಸಂಪರ್ಕದಲ್ಲಿದ್ದಾರೆ' ಎಂದು ಅವರು ಸ್ಪಷ್ಟಪಡಿಸಿದರು.