ಕಾಸರಗೋಡು: ಕಲೆ, ಸಂಸ್ಕೃತಿ, ಭಾಷೆಗಳ ವೈವಿಧ್ಯತೆಯಿಂದ ಸಮೃದ್ಧವಾಗಿರುವ ಕಾಸರಗೋಡು ಎಂದಿಗೂ ಹಿಂದುಳಿದ ಜಿಲ್ಲೆಯಲ್ಲ. ಇದು ಸಂಪನ್ನತೆಯಿಂದ ಕೂಡಿದ ಮುಂದುವರಿದ ಜಿಲ್ಲೆಯಾಗಿದೆ ಎಂದು ಖ್ಯಾತ ಸಾಹಿತಿ ಡಾ.ಇಂದುಮೆನನ್ ತಿಳಿಸಿದ್ದಾರೆ.
ಅವರು ಅಂತಾರಾಷ್ಟ್ರೀಯ ಬೇಕಲ್ ಉತ್ಸವದ ಎರಡನೇ ದಿನ ನಡೆದ ಸಾಂಸ್ಕøತಿಕ ಕೂಟದಲ್ಲಿ ಮುಖ್ಯ ಭಾಷಣ ಮಾಡಿದರು.
ಇತರ ಜಿಲ್ಲೆಗಳಲ್ಲಿ ಕಾಣಿಸಿಕೊಳ್ಳದ ಭಾಷಾ ವೈವಿಧ್ಯ ಇಲ್ಲಿದೆ. ಸಪ್ತಭಾಷಾ ಸಂಗಮ ಭೂಮಿಯಾಗಿರುವ ಕಾಸರಗೋಡಿಗೆ 5 ಪ್ರಬಲ ಬುಡಕಟ್ಟು ಭಾಷೆಗಳ ಬೆಂಬಲವೂ ಇವುವುದು ಶ್ಲಾಘನೀಯ ಎಂದು ತಿಳಿಸಿದರು.
ಪುಲ್ಲೂರು ಪೆರಿಯ ಪಂಚಾಯತ್ ಅಧ್ಯಕ್ಷ ಸಿ.ಕೆ.ಅರವಿಂದಾಕ್ಷನ್ ಅಧ್ಯಕ್ಷತೆ ವಹಿಸಿದ್ದರು. ಅಜಯ್ ಪನಾಯಾಲ್ ಮಾತನಾಡಿದರು. ಸ್ವಾಗತ ಸಂಘದ ಅಧ್ಯಕ್ಷ, ಶಾಸಕ ಸಿ.ಎಚ್ ಕುಞಂಬು ಡಾ. ಇಂದು ಮೆನನ್ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಕುನ್ನುಚ್ಚಿ ಕುಞÂರಾಮನ್ ಸ್ವಾಗತಿಸಿದರು. ಮೊಯ್ತು ಹದ್ದಾದ್ ವಂದಿಸಿದರು.
31 ರಂದು ಬೇಕಲ್ ಫೆಸ್ಟ್ ಮತ್ತು ಹೊಸ ವರ್ಷದ ಮುನ್ನಾದಿನದ ಸಮಾರೋಪ ದಿನದಂದು ಚಲನಚಿತ್ರ ತಾರೆಯರು ಪಾಲ್ಗೊಳ್ಳುವರು. ಜಿಲ್ಲೆಯ ಚಿತ್ರರಂಗದ ಖ್ಯಾತ ನಟ-ನಟಿಯರು ಹೊಸ ವರ್ಷಾಚರಣೆಗೆ ಮೆರಗು ನೀಡಲಿದ್ದಾರೆ.