ಕೊಚ್ಚಿ: ಶಬರಿಮಲೆಯಲ್ಲಿ ಜನಸಂದಣಿ ನಿಯಂತ್ರಿಸಲು ಹೈಕೋರ್ಟ್ ತುರ್ತು ಮಾರ್ಗಸೂಚಿಗಳನ್ನು ಹೊರಡಿಸಿದೆ. ವರ್ಚುವಲ್ ಕ್ಯೂ ಬುಕಿಂಗ್ 90,000 ಗೆ ಸೀಮಿತಗೊಳಿಸಿದೆ.
ವರ್ಚುವಲ್ ಕ್ಯೂ ಬುಕಿಂಗ್ 90,000 ಗೆ ಸೀಮಿತವಾಗಿದೆ. ಪಂಬಾದಲ್ಲಿ ಸ್ಪಾಟ್ ಬುಕ್ಕಿಂಗ್ ನಿಲ್ಲಿಸುವಂತೆ ಪೋಲೀಸರು ಒತ್ತಾಯಿಸಿದ್ದರು. ಈ ವಿಷಯ ಮತ್ತು ದಟ್ಟಣೆ ನಿಯಂತ್ರಣಕ್ಕೆ ಕ್ರಮಗಳನ್ನು ಸ್ಪಷ್ಟಪಡಿಸುವ ಅಫಿಡವಿಟ್ ಸಲ್ಲಿಸಲು ಸರ್ಕಾರ ಸಮಯ ಕೋರಿದೆ. ವಿಚಾರಣೆ ನಾಳೆಗೆ(ಡಿ. 11ಕ್ಕೆ) ಮುಂದೂಡಲಾಗಿದೆ.
ಜನಸಂದಣಿ ನಿಯಂತ್ರಣಕ್ಕೆ ವಿಶೇಷ ಆಯುಕ್ತರು ಹಾಜರಿರಬೇಕು, ಶೆಡ್‍ಗಳು ಮತ್ತು ಕ್ಯೂ ಕಾಂಪ್ಲೆಕ್ಸ್‍ಗಳಲ್ಲಿ ಕಿಕ್ಕಿರಿದು ತುಂಬದಂತೆ ನೋಡಿಕೊಳ್ಳಬೇಕು, ಸರತಿ ಸಾಲಿನಲ್ಲಿ ನಿಂತಿರುವ ಭಕ್ತರು, ಮಹಿಳೆಯರು ಮತ್ತು ಮಕ್ಕಳಿಗೆ ಕುಡಿಯಲು ನೀರು ಮತ್ತು ಬಿಸ್ಕತ್ ಗಳನ್ನು ನೀಡಬೇಕು ಎಂದು ಹೈಕೋರ್ಟ್ ಹೊರಡಿಸಿದ ನಿರ್ದೇಶನಗಳಲ್ಲಿ ಉಲ್ಲೇಖಿಸಲಾಗಿದೆ. ವಿಶೇಷ ಚಿಕಿತ್ಸೆ, ಭಕ್ತರಿಗೆ ಸಹಾಯ ಮಾಡಲು ಸ್ವಯಂಸೇವಕರನ್ನು ನೇಮಿಸಬೇಕು ಮತ್ತು ಸೌಲಭ್ಯಗಳಲ್ಲಿ ಯಾವುದೇ ಲೋಪಗಳಿದ್ದರೆ ವಿಶೇಷ ಆಯುಕ್ತರ ಗಮನಕ್ಕೆ ತರಬೇಕು ಎಮದು ಸೂಚಿಸಲಾಗಿದೆ.
ದೇವಸ್ವಂ ಪೀಠವು ಸನ್ನಿಧಾನಂ ಮುಖ್ಯ ಪೋಲೀಸ್ ಸಂಯೋಜಕರು, ತಿರುವಾಂಕೂರು ದೇವಸ್ವಂ ಬೋರ್ಡ್ ವಿಶೇಷ ಅಧಿಕಾರಿ ಮತ್ತು ವಿಶೇಷ ಆಯುಕ್ತರ ಕಚೇರಿಯ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರಿಗೆ ರಜೆಯಂದು ವಿಶೇಷ ಸಭೆ ನಡೆಸುವಂತೆ ಸೂಚಿಸಿದೆ.