ಕಾಸರಗೋಡು: ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅಧ್ಯಕ್ಷತೆಯಲ್ಲಿ ನಿನ್ನೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಯಿತು. ವಿಶೇಷ ಸಾರಾಂಶ ಪರಿಷ್ಕರಣೆಯ ಅಂಗವಾದ ವಿಶೇಷ ಅಭಿಯಾನವು ಡಿಸೆಂಬರ್ 2 ಮತ್ತು 3 ರಂದು ನಡೆಯಲಿದೆ. ಡಿ.3ರ ಭಾನುವಾರದಂದು ಬೂತ್ ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಮತಗಟ್ಟೆಗಳಲ್ಲಿ ಹಾಜರಿರಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಾರ್ವಜನಿಕರು ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿ ಅದಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಮತ್ತು ಹಕ್ಕುಗಳಿದ್ದಲ್ಲಿ ಡಿಸೆಂಬರ್ 9 ರೊಳಗೆ ಆನ್‍ಲೈನ್‍ನಲ್ಲಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಾರ್ವಜನಿಕರು ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿ ಮೃತರಾದವರು, ತಮ್ಮ ನಿವಾಸವನ್ನು ಬದಲಾಯಿಸಿದವರು ಅಥವಾ ಪ್ರಸ್ತುತ ವಾಸವಿಲ್ಲದವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೆ.ಪಿ. ಸತೀಶ್ಚಂದ್ರನ್, (ಸಿಪಿಐ-ಎಂ), ಎಂ. ಕುಂಞಂಬು ನಂಬಿಯಾರ್, (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಅಬ್ದುಲ್ಲ ಕುಂಞÂ್ಞ ಚೆರ್ಕಳ, (ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್) ಬಿ. ಅಬ್ದುಲ್ ಗಫೂರ್ (ಕೇರಳ ಕಾಂಗ್ರೆಸ್-ಎಂ), ಹರೀಶ್ ಬಿ ನಂಬಿಯಾರ್ (ಆರ್ ಎಸ್ ಪಿ) ಕೆ.ವಿಜಯಕುಮಾರ್ (ಆಮ್ ಆದ್ಮಿ ಪಾರ್ಟಿ), ಅಪರ ಜಿಲ್ಲಾಧಿಕಾರಿ ಕಾಸರಗೋಡು ಆರ್ ಡಿಒ ಅತುಲ್ ಎಸ್ ನಾಥ್, ಜಿಲ್ಲಾಧಿಕಾರಿ ಎಲ್ ಎ ವಿಎಂ ದಿನೇಶ್ ಕುಮಾರ್, ಜಿಲ್ಲಾಧಿಕಾರಿ ಎಲ್ ಆರ್ ಜಗ್ಗಿ ಪೌಲ್, ಚುನಾವಣಾ ವಿಭಾಗದ ಉಪ ಜಿಲ್ಲಾಧಿಕಾರಿ ಕೆ.ಅಜೇಶ್, ತಹಸೀಲ್ದಾರರಾದ ಟಿ. ಕೆ.ಉಣ್ಣಿಕೃಷ್ಣನ್, ಉಣ್ಣಿಕೃಷ್ಣ ಪಿಳ್ಳೈ, ಟಿ.ಸಾಜಿ ಮತ್ತಿತರ ಚುನಾವಣಾ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.