ಕಾಸರಗೋಡು: ಕೇರಳ ಪ್ರವಾಸೋದ್ಯಮ ಇಲಾಖೆ, ಬೇಕಲ ರೆಸಾರ್ಟ್‍ಗಳ ಅಭಿವೃದ್ಧಿ ನಿಗಮ, ಜಿಲ್ಲಾ ಪ್ರವಾಸೋದ್ಯಮ ಪ್ರಮೋಷನ್ ಕೌನ್ಸಿಲ್ ಮತ್ತು ಜಿಲ್ಲಾ ಜವಾಬ್ದಾರಿ ಮಿಷನ್ ಜಂಟಿಯಾಗಿ ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವದಲ್ಲಿ ಸ್ಥಾಫಿಸಿರುವ ಪೆವಿಲಿಯನ್ ಉದುಮ ಶಾಸಕ, ಉತ್ಸವ ಆಯೋಜನಾ ಸಮಿತಿ ಅಧ್ಯಕ್ಷ ಸಿ.ಎಚ್ ಕುಞಂಬು ಉದ್ಘಾಟಿಸಿದರು.
ಜಿಲ್ಲೆಯ ಪ್ರವಾಸೋದ್ಯಮ ಆಕರ್ಷಣೆಗಳು ಮತ್ತು ಪ್ರವಾಸೋದ್ಯಮ ಉಪಕ್ರಮಗಳ ಮಾಹಿತಿಯನ್ನು ಒಂದೇ ಕ್ಲಿಕ್‍ನಲ್ಲಿ ತಿಳಿದುಕೊಳ್ಳಲು ಕ್ಯೂ ಆರ್. ಕೋಡನ್ನು ಪಳ್ಳಿಕ್ಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಕುಮಾರನ್ ಉದ್ಘಾಟಿಸಿದರು.
ಬಿ.ಆರ್. ಡಿ. ಸಿಎಂಡಿ ಶಿಜಿನ್ ಪರಂಬತ್, ಪ್ರವಾಸೋದ್ಯಮ ಉಪಸಮಿತಿ ಅಧ್ಯಕ್ಷ ಶಿವದಾಸ್, ಸಂಚಾಲಕ ಯು. ಎಸ್. ಪ್ರಸಾದ್, ಪಿ. ಟಿ. ಸುರೇಂದ್ರನ್, ಕೆ.ಇ. ಬಕ್ಕರ್, ಸೈಫುದ್ದೀನ್ ಕಳನಾಡ್, ಶಿಜು ಕೃಷ್ಣ, ಅನೂಪ್ ಪಾಕಂ, ಸ್ವರಾಗ್ ಮತ್ತು ಸುರೇಶ್ ಉಪಸ್ಥಿತರಿದ್ದರು.