ಕಾಸರಗೋಡು: ಭಾರತೀಯ ವಕೀಲರ ಪರಿಷತ್ ಕಾಸರಗೋಡು ಜಿಲ್ಲಾ ಸಮ್ಮೇಳನ ಜಿಲ್ಲಾ ಸಮ್ಮೇಳನ ಕಾಸರಗೋಡು ಟೌನ್ ಬ್ಯಾಂಕ್ ಸಭಾಂಗಣದ ವಕೀಲ ಪಿ. ಸುಹಾಸ್ ನಗರದಲ್ಲಿ ಜರುಗಿತು.
ಹಿರಿಯ ವಕೀಲ ಐ. ವಿ. ಭಟ್ ಸಮ್ಮೇಳನ ಉದ್ಘಾಟಿಸಿದರು. ವಕೀಲರ ಪರಿಷತ್ ಜಿಲ್ಲಾಧ್ಯಕ್ಷ ವಕೀಲ ಸಿ. ಅಶೋಕ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಪರಿಷತ್ ರಾಜ್ಯ ಸಮಿತಿ ಕಾರ್ಯದರ್ಶಿ ವಕೀಲೆ ಶಿಖಾ ಎನ್.ಪಿ ಕೋಯಿಕ್ಕೋಡ್, ಜಿಲ್ಲಾ ಸಮಿತಿ ಕೋಶಾಧಿಕಾರಿ ವಕೀಲ ಕೆ. ರಾಜೇಶ್, ರಾಜ್ಯ ಸಮಿತಿ ಸದಸ್ಯರಾದ ಕೆ. ಕರುಣಾಕರನ್ ನಂಬ್ಯಾರ್, ಹೊಸದುರ್ಗ ಘಟಕದ ಅಧ್ಯಕ್ಷ ಕೆ. ಜಿ. ಅನಿಲ್, ಜಿಲ್ಲಾ ಮಹಿಳಾ ಪ್ರಮುಖರಾದ ವಕೀಲೆ ಕೆ. ಎಂ. ಬೀನಾ, ರಾಜ್ಯ ಉಪಾಧ್ಯಕ್ಷರಾದ ಬಿ. ರವೀಂದ್ರನ್ ಹಾಗೂ ಅಡ್ವ.ಗಾಯತ್ರಿ ಎಸ್.ಎಂ. ಉಪಸ್ಥಿತರಿದ್ದರು. ವಕೀಲೆ ಅಕ್ಷತಾ ಪ್ರಾರ್ಥಿಸಿದರು. ವಕೀಲರ ಪರಿಷತ್ ಜಿಲ್ಲಾ ಕಾರ್ಯದರ್ಶಿ ಮುರಳೀಧರನ್ ಸ್ವಾಗತಿಸಿದರು. ಕಾಸರಗೋಡು ಘಟಕದ ಅಧ್ಯಕ್ಷ ಪ್ರಜಿತ್ ಎಸ್.ಕೆ ವಂದಿಸಿದರು.