ಕಾಸರಗೋಡು: ವಿಶ್ವ ಮಣ್ಣು ಸಂರಕ್ಷಣಾ ದಿನಾಚರಣೆ ಅಂಗವಾಗಿ ಜಿಲ್ಲಾ ಮಣ್ಣು ಸಮೀಕ್ಷೆ, ಮಣ್ಣು ಸಂರಕ್ಷಣಾ ಇಲಾಖೆ ಹಾಗೂ ಮಧೂರು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ವಿಶ್ವ ಮಣ್ಣು ಸಂರಕ್ಷಣಾ ದಿನವನ್ನು ಮಧೂರು ಅಟಲ್‍ಜಿ ಸಭಾಂಗಣದಲ್ಲಿ ಆಚರಿಸಲಾಯಿತು.
ಶಾಸಕ ಎನ್.ಎ.ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿ ಮಾತನಾಡಿ, ನಮ್ಮ ಮಣ್ಣನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದ್ದು, ಮಣ್ಣನ್ನು ವ್ಯಾಪಕವಾಗಿ ದುರ್ಬಳಕೆ ಮಾಡುವುದರಿಂದ ಪ್ರಕ್ರತಿಯ ಮಾರಣಹೋಮಕ್ಕೆ ಕಾರಣವಾಗಲೊಇರುವುದಾಗಿ ತಿಳಿಸಿದರು.
ವಿಶ್ವ ಮಣ್ಣು ಸಮರಕ್ಷಣಾ ದಿನಾಚರಣೆ ನಿಮಿತ್ತ ಜಿಲ್ಲಾ ಮಣ್ಣು ಸಮೀಕ್ಷೆ ಮಣ್ಣು ಸಂರಕ್ಷಣಾ ಇಲಾಖೆ ಜಿಲ್ಲೆಯ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ, ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಾಸಕ ಎನ್. ಎ ನೆಲ್ಲಿಕುನ್ನು ಬಹುಮಾನ ವಿತರಿಸಿದರು. ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ಸಸಿಗಳನ್ನು ವಿತರಿಸಿದರು. ಎಡಕ್ಕಾಡ್ ಕೃಷಿ ಭವನದ ಹಿರಿಯ ಕೃಷಿ ಸಹಾಯಕ ಪಿ.ಡಿ.ದಾಸ್, ಜಿಲ್ಲಾ ಸಾಯಿಲ್ ಸರ್ವೇ ಅಧಿಕಾರಿಗಳಾದ ಎಸ್.ನಿರಂಜ್ ಬಾಬು ಮತ್ತು ಜೆಮಿ ಸ್ಟೀಫನ್ ಎಂಬಿವರು ಕೃಷಿಕರಿಗಾಗಿ ಆಯೋಜಿಸಲಾಗಿದ್ದ ತರಗತಿಗೆ ನೇತೃತ್ವ ನೀಡಿದರು. ನೇತೃತ್ವ ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಎಂ.ಸ್ಮಿಜಾ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಗಟ್ಟಿ, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋದಾ ಎಸ್.ನಾಯಕ್, ಬ್ಲಾಕ್ ಪಂಚಾಯಿತಿ ಸದಸ್ಯ ಸುಕುಮಾರನ್ ಕುದುರೆಪ್ಪಾಡಿ, ಗ್ರಾಪಂ ಸದಸ್ಯರಾದ ಜಿ.ಶ್ರೀಮತಿ, ನಸೀರಾ, ಎಂ.ಅಬ್ದುಲ್ ಜಲೀಲ್, ಎಸ್.ಮುಹಮ್ಮದ್ ಹಬೀಬ್, ಉಷಾ ಸುರೇಶ್, ಸೌಮ್ಯಾ ದಿನೇಶ್, ರಾಧಾ ಕೆ. ಪಚ್ಚಕ್ಕಾಡ್ ಮತ್ತು ಸಿ.ಎಚ್.ಉದಯಕುಮಾರ್ ಉಪಸ್ಥಿತರಿದ್ದರು. ಜಿಲ್ಲಾ ಮಣ್ಣು ಸಮೀಕ್ಷೆ ಅಸಿಸ್ಟೆಂಟ್ ಡೈರೆಕ್ಟರ್ ವೈನಿ ರಾಜನ್ ಸ್ವಾಗತಿಸಿದರು. ಮಧೂರು ಕೃಷಿ ಭವನದ ಕೃಷಿ ಅಧಿಕಾರಿ ಬಿ.ಎಚ್.ನಫೀಸತ್ ಹಶೀನಾ ವಂದಿಸಿದರು.