ಕಾಸರಗೋಡು: ಉತ್ತರ ಕೇರಳದ ಸಾಂಸ್ಕೃತಿಕ ವೈವಿಧ್ಯ ಹಾಗೂ ಮಾನವಸ್ನೇಹಿ ಪರಂಪರೆ ಸಾರುವ ಬೇಕಲ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಹಬ್ಬ ಮಾನವೀಯತೆಯ ಪ್ರತೀಕವಾಗಿದೆ ಎಂಬುದಾಗಿ ಕವಿ ಸಿ.ಎಂ.ವಿನಯಚಂದ್ರನ್ ತಿಳಿಸಿದ್ದಾರೆ. ಅವರು ಬೇಕಲ್ ಅಂತರಾಷ್ಟ್ರೀಯ ಬೀಚ್ ಉತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಸಂಜೆಯಲ್ಲಿ ಮಾತನಾಡಿದರು.
ದೇಶದ ಪ್ರಜಾಪ್ರಭುತ್ವ, ಜಾತ್ಯತೀತ ಬಹುಸಂಸ್ಕøತಿಯ ಪರಂಪರೆಯನ್ನು ಗಟ್ಟಿಗೊಳಿಸಲು ಇಂತಹ ಉತ್ಸವಗಳು ಹಕಾರಿಯಾಗಲಿದ್ದು, ಕಲೆಯ ಶಕ್ತಿಯನ್ನು ಬಳಸಿಕೊಂಡು ಮಾನವೀಯತೆಯ ಬಾವುಟ ಹಾರಿಸುವ ಕಾಲ ಸನ್ನಿಹಿತವಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಕವಿ ಸಿ.ಎಂ.ವಿನಯಚಂದ್ರನ್ ಅವರಿಗೆ ಬೇಕಲ್ ಫೆಸ್ಟ್ ಸ್ವಾಗತಸಮಿತಿ ಅಧ್ಯಕ್ಷ ಸಿ.ಎಚ್.ಕಞಂಬು ಸ್ಮರಣಿಕೆ ನೀಡಿ ಗೌರವಿಸಿದರು. ಕುತ್ತಿಕೋಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುರಳಿ ಪಯ್ಯಂಗಾನಂ ಅಧ್ಯಕ್ಷತೆ ವಹಿಸಿದ್ದರು. ಪ್ರಚಾರ ಉಪಸಮಿತಿ ಅಧ್ಯಕ್ಷ ಕೆ.ಇ.ಎ.ಬಕ್ಕರ್ ಸ್ವಾಗತಿಸಿದರು. ಗೇಟ್ ಮತ್ತು ಕೌಂಟರ್ ಉಪಸಮಿತಿಯ ಅಧ್ಯಕ್ಷ ವಿ.ವಿ.ಸುಕುಮಾರನ್ ವಂದಿಸಿದರು.
ಉತ್ಸವದ ಐದನೇ ದಿನದ ಸಂಜೆ ಖ್ಯಾತ ಚಿತ್ರನಟಿ, ಪದ್ಮಶ್ರೀ ಶೋಭನಾ ನೇತೃತ್ವದ ತಂಡ ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ಭಾರಿ ಜನಮನ್ನಣೆಗೆ ಕಾರಣವಾಯಿತು.