ಕಣ್ಣೂರು: ಚೆಂಬಂತೊಟ್ಟಿ ಚೆರುಪುಷ್ಪಂ ಯುಪಿ ಶಾಲೆಯಲ್ಲಿ ನಡೆಯುತ್ತಿರುವ ಎನ್‍ಎಸ್‍ಎಸ್(ರಾಷ್ಟ್ರೀಯ ಸೇವಾ ಯೋಜನೆ) ಶಿಬಿರದಲ್ಲಿ ಆಹಾರ ವಿಷವಾಗಿ ನಾಲ್ವರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಗ್ಗೆ ಸೇವಿಸಿದ ಚಿಕನ್ ಕರಿಯಲ್ಲಿ ವಿಷಾಹಾರ ಉಂಟಾಗಿರುವ ಶಂಕೆ ವ್ಯಕ್ತವಾಗಿದೆ.
ಚುಜಲಿ ಶಾಲೆಯ ಮಕ್ಕಳಿಗೆ ಹೆಚ್ಚಿನ ವಿಷಬಾಧೆ ಉಂಟಾಗಿದೆ.ಮಕ್ಕಳನ್ನು ತಳಿಪರಂಬ ತಾಲೂಕು ಆಸ್ಪತ್ರೆ ಮತ್ತು ಕೂಟ್ಟುಮುಗಂ ಆಸ್ಪತ್ರೆಗೂ ದಾಖಲಿಸಲಾಗಿದೆ.