ತಿರುವನಂತಪುರಂ: ರಾಜ್ಯ ಆರೋಗ್ಯ ಇಲಾಖೆಗೆ ಅಗತ್ಯ ಎನ್‍ಎಚ್‍ಎಂ ಹಣ ಮಂಜೂರು ಮಾಡುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವ್ಯ ಅವರಿಗೆ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮನವಿ ಮಾಡಿದ್ದಾರೆ.
ಕೇಂದ್ರ ನಿರ್ದೇಶನದಂತೆ ಕೋ-ಬ್ರಾಂಡಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ವೀಣಾ ಜಾರ್ಜ್ ಗಮನಸೆಳೆದರು.ಇನ್ನೂ ಹಣ ಪಡೆಯದಿರುವುದು ಎನ್‍ಎಚ್‍ಎಂ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ.
ಕಳೆದ ತಿಂಗಳು ಸಹ, ಉದ್ಯೋಗಿಗಳ ಸಂಬಳ ಸೇರಿದಂತೆ ತುರ್ತು ಸೇವೆಗಳನ್ನು ರಾಜ್ಯದ ಹಣವನ್ನು ಮಾತ್ರ ಬಳಸಿ ಒದಗಿಸಲಾಗಿದೆ. ಈ ಸಂದರ್ಭದಲ್ಲಿ ಆದಷ್ಟು ಬೇಗ ಹಣ ಸಿಗುವಂತೆ ಮಾಡುವಂತೆ ವೀಣಾ ಜಾರ್ಜ್ ಮನವಿ ಮಾಡಿದರು. ಕೋವಿಡ್ ಪರಿಶೀಲನಾ ಸಭೆಯಲ್ಲಿ ವೀಣಾ ಜಾರ್ಜ್ ಅವರು ಕೇಂದ್ರ ಆರೋಗ್ಯ ಸಚಿವರಲ್ಲಿ ಮನವಿ ಮಾಡಿದರು.