ಬದಿಯಡ್ಕ: ಇತ್ತೀಚೆಗೆ ಬದಿಯಡ್ಕ ಸರ್ಕಾರಿ ಪ್ರೌಢಶಾಲೆಯಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಮಟ್ಟದ ಭಾಸ್ಕರಾಚಾರ್ಯ ಗಣಿತ ಸೆಮಿನಾರ್‍ನ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿ ಚಿತ್ತರಂಜನ್ ಕೆ. ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಈತ ಕಡಂದೇಲು ಹರೀಶ್ ಕುಮಾರ್ ಹಾಗೂ ಶಿಕ್ಷಕಿ ಜ್ಯೋತ್ಸ್ನಾ ಇವರ ಪುತ್ರ.