ಕಾಸರಗೋಡು : ರಾಷ್ಟ್ರೀಯ ಹೆದ್ದಾರಿ ಬೇವಿಂಜ ತಿರುವಿನಲ್ಲಿ ಲಾರಿ ಮತ್ತು ಬೈಕ್ ಪರಸ್ಪರ ಕ್ಕಿಯಾಗಿ ಪ್ಲಸ್ ಒನ್ ವಿದ್ಯಾರ್ಥಿ ಮೃತಪಟ್ಟಿಟ್ಟು, ವಿದ್ಯಾರ್ಥಿ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದಾನೆ. ಬೈಕ್ ಹಿಂಬದಿ ಸವರ ನಾಯಮರ್‍ಮೂಲೆ ಟಿಐಎಚ್‍ಎಸ್‍ನ ಪ್ಲಸ್ ವನ್ ವಿದ್ಯಾರ್ಥಿ ಹಾಗೂ ಆಲಂಪಾಡಿ ಅರೆಪಾಡಿ ನಿವಾಸಿ ಶಿಹಾಬ್ (17) ಮೃತಪಟ್ಟವರು. ಬೈಕ್ ಚಲಾಯಿಸುತ್ತಿದ್ದ ಇವರ ಸ್ನೇಹಿತ ಮಂಗಳೂರು ಪಿಎ ಕಾಲೇಜಿನ ಪ್ರಥಮ ವರ್ಷದ ಬಿಬಿಎ ಲಾಜಿಸ್ಟಿಕ್ಸ್ ವಿದ್ಯಾರ್ಥಿ ಅರೆಪಾಡಿ ನಿವಾಸಿ ಆದಿಲಿ (18) ಗಾಯಾಳು. ಚೆರ್ಕಳ-ಬೇವಿಂಜ ಹೇರ್ ಪಿನ್ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಬೈಕ್ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಶಿಹಾಬ್ ಮಂಗಳೂರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. . ವಿದ್ಯಾನಗರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.