ತಿರುವನಂತಪುರಂ: ಪಿಣರಾಯಿ ವಿಜಯನ್ ಅವರ ಎರಡನೇ ಅವಧಿ ಸರ್ಕಾರದ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದಾರೆ. ಸಾರಿಗೆ ಸಚಿವ ಆಂಟನಿ ರಾಜು ಮತ್ತು ಬಂದರು ಸಚಿವ ಅಹ್ಮದ್ ದೇವರ್ ಕೋವಿಲ್ ಇಂದು ರಾಜೀನಾಮೆ ಸಲ್ಲಿಸಿದರು.
ಸಂಪುಟ ಪುನಾರಚನೆಯ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇವರಿಬ್ಬರ ಸ್ಥಾನಕ್ಕೆ ಕಡನ್ನಪಳ್ಳಿ ರಾಮಚಂದ್ರನ್ ಹಾಗೂ ಕೆ.ಬಿ.ಗಣೇಶ್‍ಕುಮಾರ್ ಅವರನ್ನು ಸಂಪುಟಕ್ಕೆ ತರಲು ಸೂಚಿಸಲಾಗಿದೆ. 29ರಂದು ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹೊಸ ಜವಾಬ್ದಾರಿ ಲಭಿಸಿದ್ದು ಖುಷಿ ತಂದಿದೆ ಎಂದು ಕಡನ್ನಪ್ಪಳ್ಳಿ ರಾಮಚಂದ್ರನ್ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಇಲಾಖೆ ನೀಡಿದರೂ ಜವಾಬ್ದಾರಿಯುತವಾಗಿ ನಿರ್ವಹಿಸಲಾಗುವುದು. ನೀಡಲಾಗುವ ಇಲಾಖೆಗೆ ಸಂಬಂಧಿಸಿದಂತೆ ಮುಂದಾಲೋಚನೆ ನಿರ್ಧಾರ ತೆಗೆದುಕೊಳ್ಳುವೆ ಎಂದು ಕಡನ್ನಪಳ್ಳಿ ಹೇಳಿದರು.